Wednesday, November 20, 2024
Wednesday, November 20, 2024

ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ: ಮೀಸಲಾತಿ ಪ್ರಕಟ

ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ: ಮೀಸಲಾತಿ ಪ್ರಕಟ

Date:

ಉಡುಪಿ, ನ.20: 1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ಉಪಬಂಧಗಳ ಮೇರೆಗೆ ಜಿಲ್ಲೆಗೆ ಸಂಬಂಧಿಸಿದಂತೆ 2023 ರ ಡಿಸೆಂಬರ್ ಮಾಹೆಯಿಂದ 2025 ರ ಜನವರಿ ಮಾಹೆಯವರೆಗೆ ಅವಧಿ ಮುಕ್ತಾಯವಾಗುತ್ತಿರುವ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308 ಎಎ ಮತ್ತು 308 ಎಬಿ ರನ್ವಯ ಚುನಾವಣಾ ವೇಳಾಪಟ್ಟಿಯನ್ನು ಮತ್ತು ಮೀಸಲಾತಿಯನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿರುತ್ತದೆ. ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ನವೆಂಬರ್ 21 ರಂದು ಹೊರಡಿಸಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 27 ಕೊನೆಯ ದಿನ, ನವೆಂಬರ್ 28 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ನವೆಂಬರ್ 30 ಕೊನೆಯ ದಿನವಾಗಿದ್ದು, ಡಿಸೆಂಬರ್ 8 ರಂದು ಬೆಳಗ್ಗೆ 7 ರಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆ ಕಾರ್ಯವು ಡಿಸೆಂಬರ್ 11 ರಂದು ಬೆಳಗ್ಗೆ 8 ರಿಂದ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಮೀಸಲಾತಿ ವಿವರ: ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಗಂಗೊಳ್ಳಿ-1 ಗ್ರಾಮ ಪಂಚಾಯತ್ ಕ್ಷೇತ್ರದ ಒಟ್ಟು 5 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ ಮಹಿಳೆ (1), ಸಾಮಾನ್ಯ (2) ಹಾಗೂ ಸಾಮಾನ್ಯ ಮಹಿಳೆ (2), ಗಂಗೊಳ್ಳಿ-2 ಗ್ರಾಮ ಪಂಚಾಯತ್ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ (2), ಸಾಮಾನ್ಯ (1) ಹಾಗೂ ಸಾಮಾನ್ಯ ಮಹಿಳೆ (1), ಗಂಗೊಳ್ಳಿ-3 ಗ್ರಾಮ ಪಂಚಾಯತ್ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ (1), ಹಿಂದುಳಿದ ವರ್ಗ ಅ ಮಹಿಳೆ (1), ಹಿಂದುಳಿದ ವರ್ಗ ಬ ಮಹಿಳೆ (1) ಹಾಗೂ ಸಾಮಾನ್ಯ (1), ಗಂಗೊಳ್ಳಿ-4 ಗ್ರಾಮ ಪಂಚಾಯತ್ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ (1), ಹಿಂದುಳಿದ ವರ್ಗ ಅ (1) ಹಾಗೂ ಸಾಮಾನ್ಯ ಮಹಿಳೆ (2), ಗಂಗೊಳ್ಳಿ-5 ಗ್ರಾಮ ಪಂಚಾಯತ್ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ ಮಹಿಳೆ (1), ಸಾಮಾನ್ಯ (2) ಹಾಗೂ ಸಾಮಾನ್ಯ ಮಹಿಳೆ (1), ಗಂಗೊಳ್ಳಿ-6 ಗ್ರಾಮ ಪಂಚಾಯತ್ ಕ್ಷೇತ್ರದ ಒಟ್ಟು 5 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ ಮಹಿಳೆ (1), ಹಿಂದುಳಿದ ವರ್ಗ ಬ (1), ಸಾಮಾನ್ಯ (1) ಹಾಗೂ ಸಾಮಾನ್ಯ ಮಹಿಳೆ (2), ಗಂಗೊಳ್ಳಿ-7 ಗ್ರಾಮ ಪಂಚಾಯತ್ ಕ್ಷೇತ್ರದ ಒಟ್ಟು 3 ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ (1) ಹಾಗೂ ಸಾಮಾನ್ಯ (2) ಮತ್ತು ಗಂಗೊಳ್ಳಿ-8 ಗ್ರಾಮ ಪಂಚಾಯತ್ ಕ್ಷೇತ್ರದ ಒಟ್ಟು 4 ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ (1), ಹಿಂದುಳಿದ ವರ್ಗ ಅ (1), ಸಾಮಾನ್ಯ (1) ಹಾಗೂ ಸಾಮಾನ್ಯ ಮಹಿಳೆ (1) ಮೀಸಲಾತಿಯನ್ನು ನಿಗಧಿಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ ಸಂಘಟನೆಯಿಂದ ಹೊಸಬದುಕು ಆಶ್ರಮಕ್ಕೆ ನೆರವು

ಕೋಟ, ನ.20: ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ...

ಉಡುಪಿ ನಗರಸಭೆ ಕಚೇರಿಯಲ್ಲಿ ಸೋಮಶೇಖರ ಭಟ್ ರವರ ಭಾವಚಿತ್ರ ಅನಾವರಣ

ಉಡುಪಿ, ನ.20: ಉಡುಪಿ ನಗರಸಭೆ ಕಚೇರಿಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಉಡುಪಿ...

ರಾಜ್ಯಮಟ್ಟದ ರೆಡ್‌ಕ್ರಾಸ್ ಪರೀಕ್ಷೆಗೆ ಆಹ್ವಾನ

ಉಡುಪಿ, ನ.20: ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಪ್ರೌಢಶಾಲೆ ಮತ್ತು ಪದವಿ...
error: Content is protected !!