ಮಂಗಳೂರು, ನ.20: ಮಂಗಳೂರು ನೊಂದಣಿ ಕಚೇರಿಯ ಸಮಸ್ಯೆಯ ಬಗ್ಗೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಎಚ್ ವಿ ರವರ ನೇತೃತ್ವದಲ್ಲಿ ಜಿಲ್ಲಾ ನೊಂದಾವಣಿ ಅಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಕಾವೇರಿ 2.0 ತಂತ್ರಾಂಶದಿಂದ ಸಾಮಾನ್ಯ ಜನರಿಗೆ ಆಗುವ ತೊಂದರೆಗಳನ್ನು ತಿಳಿಸಿ ಸರಿಪಡಿಸುವಂತೆ ಮನವಿಯನ್ನು ಸಲ್ಲಿಸಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾ ನೊಂದಣಿ ಅಧಿಕಾರಿಯವರು ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು. ವಕೀಲರ ಸಂಘದ ನಿಯೋಗದಲ್ಲಿ ಉಪಾಧ್ಯಕ್ಷರಾದ ಸುಜಿತ್ ಕುಮಾರ್, ಹಿರಿಯ ಸಮಿತಿ ಸದಸ್ಯರಾದ ಸುಮನ ಶರಣ್, ಮಹಮ್ಮದ್ ಅಸ್ಗರ್ ಮುಡಿಪು, ಹಿರಿಯ ವಕೀಲರಾದ ಮರಿಯಮ್ಮ ಥಾಮಸ್, ಸತೀಶ್ ಭಟ್, ಇಸ್ಮಾಯಿಲ್ ಎಸ್., ಸುಜಾತ ಗೋಪಾಲ್, ನಯನ ಪೈ, ಉದನೇಶ್ವರ ಬಿ ಮತ್ತು ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ನೊಂದಣಿ ಅಧಿಕಾರಿಯವರಿಗೆ ಮನವಿ
ಜಿಲ್ಲಾ ನೊಂದಣಿ ಅಧಿಕಾರಿಯವರಿಗೆ ಮನವಿ
Date: