ನವದೆಹಲಿ, ನ.19: 2047 ರ ವೇಳೆಗೆ ಭಾರತವು ವರ್ಷಕ್ಕೆ 10 ಸಾವಿರ ಮಿಲಿಯನ್ ಮೆಟ್ರಿಕ್ ಟನ್ ಬಂದರು ನಿರ್ವಹಣೆ ಸಾಮರ್ಥ್ಯವನ್ನು ಗುರಿಯಾಗಿಸಿಕೊಂಡಿದೆ ಎಂದು ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಅವರು ಹೇಳಿದರು. ‘ದ ಗ್ರೇಟ್ ಓಷನ್ಸ್ ಡೈಲಾಗ್’ ಎಂಬ ಚೊಚ್ಚಲ ಸಾಗರಮಂಥನ್ನಲ್ಲಿ ಮಾತನಾಡಿದ ಸೋನೊವಾಲ್, ಭಾರತ ಕ್ರಾಂತಿಯ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಬಂದರು ಸಾಮರ್ಥ್ಯವನ್ನು ಹೆಚ್ಚಿಸಲು 80 ಲಕ್ಷ ಕೋಟಿಗಳ ಹೂಡಿಕೆಯೊಂದಿಗೆ ಅದರ ಕಡಲ ವಲಯವು ಒಳನಾಡಿನ ಜಲಮಾರ್ಗಗಳನ್ನು ನಿರ್ಮಿಸುವುದು, ಹಡಗು ಸಾಗಣೆ ಮತ್ತು ಹಡಗು ನಿರ್ಮಾಣ, ಶುದ್ಧ ಇಂಧನದಿಂದ ಚಲಿಸುವ ಭವಿಷ್ಯದ ಹಡಗುಗಳನ್ನು ನಿರ್ಮಿಸುವುದು ಮುಂತಾದ ಯೋಜನೆಗಳ ತಯಾರಿ ನಡೆಯುತ್ತಿದೆ ಎಂದರು.
2047ರ ವೇಳೆಗೆ 10,000 ಎಂಎಂಟಿ ಬಂದರು ನಿರ್ವಹಣೆ ಸಾಮರ್ಥ್ಯ ಗುರಿ: ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್
2047ರ ವೇಳೆಗೆ 10,000 ಎಂಎಂಟಿ ಬಂದರು ನಿರ್ವಹಣೆ ಸಾಮರ್ಥ್ಯ ಗುರಿ: ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್
Date: