Monday, November 18, 2024
Monday, November 18, 2024

ಹೆಸರು ಕಾಳು ಖರೀದಿ ಅವಧಿ ವಿಸ್ತರಣೆ

ಹೆಸರು ಕಾಳು ಖರೀದಿ ಅವಧಿ ವಿಸ್ತರಣೆ

Date:

ಬೆಂಗಳೂರು, ನ.17: ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿ ಅವಧಿಯನ್ನು ಡಿಸೆಂಬರ್ 18ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಈ ಮೊದಲು ಖರೀದಿ ಅವಧಿಯನ್ನು ನವೆಂಬರ್ 21ರ ವರೆಗೆ ನಿಗದಿಪಡಿಸಲಾಗಿತ್ತು. ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಡಿಸೆಂಬರ್ 18ರವರೆಗೆ ಖರೀದಿ ಮಾಡಲು ಅನುಮತಿ ನೀಡಿದೆ. ಪ್ರತಿ ಕ್ವಿಂಟಾಲ್‌ಗೆ 8,682 ರೂ. ನಿಗದಿಪಡಿಸಲಾಗಿದ್ದು, ಇದುವರೆಗೆ 20,450 ಮೆಟ್ರಿಕ್ ಟನ್ ಖರೀದಿ ಮಾಡಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಗ್ರಾಮೀಣ ಬಂಟರ ಸಂಘ: ಉದ್ಯೋಗ ಮೇಳ

ಉಡುಪಿ, ನ.17: ಉಡುಪಿ ಗ್ರಾಮೀಣ ಬಂಟರ ಸಂಘದ ಸಭಾಭವನ ನಿರ್ಮಾಣ ಮತ್ತು...

ಆಂಬುಲೆನ್ಸ್ ಸಿಬ್ಬಂದಿಗಳಿಗೆ ವೇತನ ಪಾವತಿಸಲಾಗಿದೆ: ದಿನೇಶ್ ಗುಂಡೂರಾವ್

ಬೆಂಗಳೂರು, ನ.17: 108 ಆರೋಗ್ಯ ಕವಚ ಯೋಜನೆಯ ಆಂಬುಲೆನ್ಸ್‌ ಸಿಬ್ಬಂದಿಗೆ ಸರ್ಕಾರದಿಂದ...

ಶತಮಾನೋತ್ತರ ರಜತ ಮಹೋತ್ಸವ ಸಂಭ್ರಮದ ವಿಜ್ರಂಭಣೆಯಲ್ಲಿ ಉಡುಪಿಯ ನ್ಯಾಯಾಲಯ ಮತ್ತು ವಕೀಲರ ಸಂಘ

125 ನೇ ವರ್ಷವನ್ನು ಕಂಡ ಇತಿಹಾಸದ ಗೌರವ ಕೆಲವೇ ನ್ಯಾಯಾಲಯಗಳ ಪೈಕಿಯಲ್ಲಿ...

ಮಂಗಳೂರು ವಕೀಲರ ಸಂಘ: ಪೋಸ್ಟರ್ ಬಿಡುಗಡೆ

ಮಂಗಳೂರು, ನ.17: ಮಂಗಳೂರು ವಕೀಲರ ಸಂಘದ ವತಿಯಿಂದ ಡಿಸೆಂಬರ್ 13,14, ಮತ್ತು...
error: Content is protected !!