Thursday, November 14, 2024
Thursday, November 14, 2024

‘ನನ್ನ ನಾಡು ನನ್ನ ಹಾಡು’ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ

‘ನನ್ನ ನಾಡು ನನ್ನ ಹಾಡು’ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ

Date:

ಉಡುಪಿ, ನ.10: ಲಯನ್ಸ್ 317 ಸಿ ಹಾಗೂ ರೋಟರಿ ಕ್ಲಬ್ ಜಿಲ್ಲೆ 3182 ಒಳಗೊಂಡ ಲಯನ್ಸ್ ಕ್ಲಬ್ ಅಂಬಲಪಾಡಿ, ಕಲ್ಯಾಣಪುರ, ಸಂತೆಕಟ್ಟೆ, ಉಡುಪಿ ಚೇತನ ಹಾಗೂ ರೋಟರಿ ಸಂಸ್ಥೆ ಅಂಬಲಪಾಡಿ, ಕಲ್ಯಾಣಪುರ, ಉಡುಪಿ ಮಿಡ್ ಟೌನ್ ಹಾಗೂ ಬ್ರಹ್ಮಾವರ ಇವರ ವತಿಯಿಂದ ಮಣಿಪಾಲ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ನನ್ನ ನಾಡು ನನ್ನ ಹಾಡು’ ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಉಡುಪಿ ಅಜ್ಜರಕಾಡಿನ ಟೌನ್ ಹಾಲ್ ನಲ್ಲಿ ಶನಿವಾರ ನಡೆಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಸಿಎ ದೇವಾನಂದ ಅವರು, ರೋಟರಿ ಹಾಗೂ ಲಯನ್ಸ್ ಜೊತೆಗೂಡಿ ಪ್ರತಿಭೆಗಳನ್ನು ಅನ್ವೇಷಿಸುವ ಕೆಲಸ ಮಾಡಿದೆ. ಇಂತಹ ಸಂಗೀತ ಕಾರ್ಯಕ್ರಮಗಳ ಮೂಲಕ‌ ಪ್ರತಿಭೆಗಳ ಪರಿಚಯವಾಗುತ್ತದೆ. ಉತ್ತಮ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ಅವರನ್ನು ಬೆಳೆಸುವ ಕೆಲಸ ಆಗಬೇಕು ಎಂದರು. ಮಣಿಪಾಲ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಮುಖ್ಯಸ್ಥೆ ತೇಜಸ್ವಿನಿ ಅನಿಲ್ ರಾಜ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೈದ್ಯ ಡಾ. ಅಭಯ್ ಟಿ ಕಾಮತ್ ದಂಪತಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಮಟ್ಟದ ಅಂತಿಮ ಸುತ್ತಿನ ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ಚೈತನ್ಯ ಎನ್ ಹೆಬ್ರಿ ವಿಜೇತರಾಗಿ, ಇವರಿಗೆ ಗಾನ ಸುರಭಿ ಬಿರುದು ನೀಡಿ ಸನ್ಮಾನಿಸಲಾಯಿತು. ರೋಟರಿ ವಿಭಾಗದಿಂದ ರೊಟೇರಿಯನ್ ಅಕ್ಷತಾ ವಿನಯ್ (ರೋಟರಿ ಆರ್ ಸಿ ಗಂಗೊಳ್ಳಿ) ವಿಜೇತರಾಗಿ, ಗಾನ ಸಾರಥಿ ಬಿರುದು ನೀಡಿ ಸನ್ಮಾನಿಸಲಾಯಿತು ಹಾಗೂ ಲಯನ್ಸ್ ವಿಭಾಗದಿಂದ ಲಯನ್ ಚಿನ್ಮಯಿ ಶೈಣೈ (ಲಯನ್ಸ್ ಕ್ಲಬ್ ಬೆಳ್ಮಣ್ ಸೆಂಚುರಿ), ಇವರು ವಿಜೇತರಾಗಿ ಗಾನ ಸಾಮ್ರಾಟ್ ಬಿರುದು ನೀಡಿ ಸನ್ಮಾನಿಸಲಾಯಿತು

ರೋಟರಿಯ ಬಿ.ಎಂ. ಭಟ್, ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಸ್ವಪ್ನ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ರೋಟರಿಯ ಜಿಲ್ಲಾ ಕಾರ್ಯದರ್ಶಿ ಐರೋಡಿ ರಾಮದೇವ ಕಾರಂತ್, ಲಯನ್ಸ್ ಜಿಲ್ಲಾ ಚೀಫ್ ಕೋರ್ಡಿನೇಟರ್ ಹರಿಪ್ರಸಾದ್ ರೈ, ಸಂಗೀತ ಕಲಾವಿದರ ಸಂಘದ ಅಧ್ಯಕ್ಷೆ ಮುಕ್ತ ಶ್ರೀನಿವಾಸ್ ಭಟ್, ಅಂಬಲಪಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ತಾರನಾಥ ಆರ್. ಸುವರ್ಣ, ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷ ರಾಜು ಪೂಜಾರಿ, ಕಲ್ಯಾಣಪುರ ಲಯನ್ಸ್ ಕ್ಲಬ್ ಅಧ್ಯಕ್ಷ ರೋನಾಲ್ಡ್ ಸ್ವುಹಾರಿಸ್, ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಆರೂರು ಶ್ರೀಧರ ಶೆಟ್ಟಿ, ಸಂತೆಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಜುಲ್ಯಾಸ್ ಲೂವಿಸ್, ಕಲ್ಯಾಣಪುರ ರೋಟರಿ ಕ್ಲಬ್ ಕಾರ್ಯದರ್ಶಿ ಬ್ರೈನ್ ಡಿಸೋಜ, ಉಡುಪಿ ಚೇತನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಉಡುಪಿ ಮಿಡ್ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಪ್ರಭಾಕರ ಶೆಟ್ಟಿ, ಅನಿಲ್ ರಾಜ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ನಂದಕಿಶೋರ್ ಕೆಮ್ಮಣ್ಣು ಸ್ವಾಗತಿಸಿದರು. ಅಂಬಲಪಾಡಿ ರೋಟರಿ ಸಂಸ್ಥೆಯ ಕಲ್ಚರಲ್ ಕೋರ್ಡಿನೇಟರ್ ನಾಗಭೂಷಣ್ ಶೇಟ್, ರೋಟರಿಯ ಗಣೇಶ್ ಕುಮಾರ್ ಮಟ್ಟು ಪ್ರಸ್ತಾವಿಕವಾಗಿ ಮಾತನಾಡಿದರು, ಲಯನ್ ರಜತ್ ಹೆಗ್ಡೆ ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮ

ಉಡುಪಿ, ನ.13: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ...

ಮೀನುಗಾರರಿಗೆ ಎನ್.ಎಫ್.ಡಿ.ಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಉಡುಪಿ, ನ.13: ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಸಂಘಟಿತ ವಲಯವಾಗಿ ರೂಪಿಸುವ...

ಆಳ್ವಾಸ್ ವಿರಾಸತ್-2024: ಮಳಿಗೆ ತೆರೆಯಲು ಆಹ್ವಾನ

ಮೂಡುಬಿದಿರೆ, ನ.13: ಇದೇ ಬರುವ ಡಿಸೆಂಬರ್ 10 ಮಂಗಳವಾರದಿಂದ 15ನೇ ಭಾನುವಾರದವರೆಗೆ...

ಜ್ಞಾನಸುಧಾ: ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಉಡುಪಿ, ನ.13: ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ...
error: Content is protected !!