Friday, November 8, 2024
Friday, November 8, 2024

ಮೆಸ್ಕಾಂ ವತಿಯಿಂದ ಕಂಬ ಹತ್ತಿ ಇಳಿಯುವ ಉಚಿತ ತರಬೇತಿ

ಮೆಸ್ಕಾಂ ವತಿಯಿಂದ ಕಂಬ ಹತ್ತಿ ಇಳಿಯುವ ಉಚಿತ ತರಬೇತಿ

Date:

ಉಡುಪಿ, ನ.7: ಕ.ವಿ.ಪ್ರ.ನಿ.ನಿ ಯಿಂದ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಕಿರಿಯ ಪವರ್‌ಮೆನ್ ನೇಮಕಾತಿ ಸಂಬಂಧ ಸರಕಾರವು ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಮೆಸ್ಕಾಂ ಉಡುಪಿ ವಿಭಾಗದ ವತಿಯಿಂದ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಕಂಬ ಹತ್ತಿ ಇಳಿಯುವ ಉಚಿತ ತರಬೇತಿಯನ್ನು ನವೆಂಬರ್ 14 ರಿಂದ 16 ರ ವರೆಗೆ ನಗರದ ಕುಂಜಿಬೆಟ್ಟು ಎಂ.ಜಿ.ಎಂ ಕಾಲೇಜು ಕ್ರೀಡಾಂಗಣದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳು ಭಾವಚಿತ್ರ ಇರುವ ಗುರುತಿನ ಚೀಟಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ಪ್ರತಿ ಹಾಗೂ ಕಂಬ ಹತ್ತಿ ಇಳಿಯಲು ಸೂಕ್ತ ಉಡುಪಿನೊಂದಿಗೆ ಹಾಜರಾಗಬೇಕು. ನೇಮಕಾತಿಯು ಅಭ್ಯರ್ಥಿಯ ಅಂಕ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ಅವಲಂಭಿತವಾಗಿದ್ದು, ತರಬೇತಿ ಅವಧಿಯಲ್ಲಿ ಯಾವುದೇ ಉಚಿತ ಸೌಲಭ್ಯಗಳು ಇರುವುದಿಲ್ಲ ಹಾಗೂ ತರಬೇತಿಯು ನೇಮಕಾತಿಯ ಭಾಗವಾಗಿರುವುದಿಲ್ಲ ಎಂದು ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧಿಸಲು ಆಸ್ಟ್ರೇಲಿಯಾ ಸರ್ಕಾರ ಸಜ್ಜು

ಯು.ಬಿ.ಎನ್.ಡಿ.,ನ.7: ಆಸ್ಟ್ರೇಲಿಯನ್ ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಾಮಾಜಿಕ...

ಬರ ಪೀಡಿತ ಜಾಂಬಿಯಾಕ್ಕೆ ಭಾರತದಿಂದ 2,500 ಮೆಟ್ರಿಕ್ ಟನ್ ಜೋಳ

ನವದೆಹಲಿ, ನ.7: ಜಾಂಬಿಯಾದಲ್ಲಿ ನಡೆಯುತ್ತಿರುವ ಬರ ಪರಿಸ್ಥಿತಿಯ ಬಗ್ಗೆ ಭಾರತ ಕಳವಳ...

ವಿವಿಧ ಸಾಲ ಯೋಜನೆಗಳ ಸಂಪರ್ಕ ಕಾರ್ಯಕ್ರಮ

ಉಡುಪಿ, ನ.7: ಕೆನರಾ ಬ್ಯಾಂಕ್ ಉಡುಪಿ ಇವರ ವತಿಯಿಂದ ಕೇಂದ್ರ ಸರಕಾರದ...

ಒಡಂಬಡಿಕೆ ಅವಧಿ ಮುಗಿದ ಕೃಷಿ ಯಂತ್ರಧಾರೆ ಕೇಂದ್ರಗಳ ನಿರ್ವಹಣೆಗೆ ಆಸಕ್ತ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಉಡುಪಿ, ನ.7: ಜಿಲ್ಲೆಯಲ್ಲಿ 6 ವರ್ಷದ ಒಡಂಬಡಿಕೆ ಅವಧಿ ಮುಗಿದ ವಿ.ಎಸ್.ಟಿ...
error: Content is protected !!