Thursday, November 28, 2024
Thursday, November 28, 2024

ಜ್ಞಾನಸುಧಾ: 10ನೇ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ

ಜ್ಞಾನಸುಧಾ: 10ನೇ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ

Date:

ಉಡುಪಿ, ನ.6: ದೇಶದ ಯುವ ಪೀಳಿಗೆಯನ್ನು ಸದೃಢ ನಾಯಕರನ್ನಾಗಿ ರೂಪಿಸಲು ರಚಿಸಿರುವ ಎನ್ ಎಸ್ ಎಸ್ ಸ್ವಯಂಸೇವಕರಾಗಿ ಶಿಬಿರಗಳಲ್ಲಿ ಭಾಗವಹಿಸುವುದು ಅಪರೂಪದ ಅವಕಾಶ ಇದರಲ್ಲಿ ಸಕ್ರೀಯವಾಗಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಿ ಎಂದು ಕಾರ್ಕಳದ ಬಿ.ಇ.ಓ. ಭಾಸ್ಕರ್ ಟಿ ಯವರು ಹೇಳಿದರು. ಇವರು ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ, ಪದವು ಇಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿ ಶಿಕ್ಷಣ ನೈಜ ಶಿಕ್ಷಣ: ಸವಿತಾ ಎರ್ಮಾಳ್

ಶಿಬಿರದ ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ವಿಭಾಗದ ಎನ್.ಎಸ್.ಎಸ್. ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಇವರು ಮಾತನಾಡಿ ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಸಮಾಜಮುಖಿ ಕೆಲಸಗಳನ್ನು ಪ್ರಕೃತಿ ಶಿಕ್ಷಣಗಳೊಂದಿಗೆ ಕಲಿಸುವ ಮಾಧ್ಯಮವಾಗಿದೆ. ಜ್ಞಾನಸುಧಾದ ಎನ್.ಎಸ್.ಎಸ್. ಈ ನಿಟ್ಟಿನಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತ 10ನೇ ಶಿಬಿರವನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜ್ಞಾನಸುಧಾದ ಡಾ.ಸುಧಾಕರ ಶೆಟ್ಟಿ ಸಮಾಜಕ್ಕೆ ಮಾದರಿ: ನವೀನ್ ನಾಯಕ್

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶಿಕ್ಷಣವನ್ನು ನೀಡುತ್ತ ಮೌಲ್ಯಸುಧಾದಂತಹ ಮೌಲ್ಯಯುಕ್ತ ಕಾರ್ಯಕ್ರಮಗಳನ್ನು ನೀಡುತ್ತ, ಸಮಾಜದ ಆಶೋತ್ತರಗಳಿಗಾಗಿ ಮಿಡಿದು ಪ್ರತಿಷ್ಠಿತ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಡಾ.ಸುಧಾಕರ ಶೆಟ್ಟಿಯವರು ಸಮಾಜಕ್ಕೆ ಮಾದರಿ ಎಂದು ಉದ್ಯಮಿಗಳಾದ ನವೀನ್ ನಾಯಕ್ ಹೇಳಿದರು. ಶಿಬಿರದ ಧ್ವಜಾರೋಹಣ ಕಾರ್ಯಕ್ರಮವನ್ನು ನಿಟ್ಟೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶೋಭಾರವರು ನೆರವೇರಿಸಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಓ. ದಿನೇಶ್ ಎಂ ಕೊಡವೂರು ಸಂಸ್ಥೆಯ ಕೀರ್ತಿಗೆ ತಕ್ಕಹಾಗೆ ಶಿಬಿರವನ್ನು ಸಂಪನ್ನಗೊಳಿಸಿ ಎಂದು ಶುಭ ಹಾರೈಸಿದರು.

ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿಯ ಸದಸ್ಯರಾದ ಶಾಂತಿರಾಜ್ ಹೆಗ್ಡೆ, ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಉಪಪ್ರಾಂಶುಪಾಲರಾದ ಉಷಾ ರಾವ್ ಯು., ಸಂಸ್ಥೆಯ ಪಿ.ಆರ್.ಓ. ಜ್ಯೋತಿ ಪದ್ಮನಾಭ ಭಂಡಿ, ಆತಿಥೇಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ, ಪದವು ಇಲ್ಲಿಯ ಮುಖ್ಯೋಪಾಧ್ಯಾಯರಾದ ನಾಗರಾಜ್ ಬಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷರಾದ ಸುರೇಶ್ ಆಚಾರ್ಯ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಂಗೀತಾ ಬಿ.ಎನ್., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರೂಪೇಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ರವಿ ಜಿ
ಸ್ವಾಗತಿಸಿ, ಕನ್ನಡ ಉಪನ್ಯಾಸಕ ಸಂತೋಷ್ ನೆಲ್ಲಿಕಾರು ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯುವನಿಧಿ ಯೋಜನೆ: ಸ್ವಯಂ ಘೋಷಣೆ ಕಡ್ಡಾಯ

ಉಡುಪಿ, ನ.27: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ...

ತುಳು ಕಾದಂಬರಿ ಗತಿ ಬದಲಾಯಿಸಿದ ‘ನಾಣಜ್ಜೆರ್’

ಮೂಡುಬಿದಿರೆ, ನ.27: ತುಳು ಕಾದಂಬರಿ ಪ್ರಕಾರದ ದಿಕ್ಕನ್ನೇ ಬದಲಾಯಿಸಿದ ಕೃತಿ ‘ನಾಣಜ್ಜೆರ್...

ದೇಶದ ಸಂಸ್ಕೃತಿಯಲ್ಲಿ ಸಂವಿಧಾನದ ಬೇರು

ವಿದ್ಯಾಗಿರಿ (ಮೂಡುಬಿದಿರೆ), ನ.27: ನಮ್ಮ ಸಂವಿಧಾನದ ಮೂಲತತ್ವಗಳ ಬೇರು ದೇಶದ ಇತಿಹಾಸ,...

ಯಕ್ಷಾರಾಧನೆ ರಂಗದೋಕುಳಿ

ಕೋಟ, ನ.27: ಒಂದು ಕಾಲದಲ್ಲಿ ಯಕ್ಷಗಾನದ ಮಹತ್ವ ಅರಿತವರು ಬಹಳ ವಿರಳವಾಗಿದ್ದರು,...
error: Content is protected !!