Thursday, November 21, 2024
Thursday, November 21, 2024

ಸ್ವ ಅನುಮಾನದಿಂದ ಹೊರಬನ್ನಿ

ಸ್ವ ಅನುಮಾನದಿಂದ ಹೊರಬನ್ನಿ

Date:

ಳ್ಳೆಯ ನರ್ತಕಿ ಗಾಯಕಿಯಾದ ಸುಮಿತ್ರಳು, ಎಲ್ಲರೂ ಅವಳನ್ನು ಸಾಧಕಿ ಎಂದು ಹೇಳಿದರೂ ಸುಮಿತ್ರಳಿಗೆ ಸಮಾಧಾನವಿಲ್ಲ, ತಾನೆನೂ ಸಾಧಿಸಿಲ್ಲವೆಂದು ನಕಾರಾತ್ಮಕವಾಗಿ ಯೋಚಿಸುತ್ತಾಳೆ. ಇದು ಪದೇ ಪದೇ ಅವಳಿಗೆ ಕಿರಿಕಿರಿ ಹುಟ್ಟಿಸುತ್ತದೆ. ಇತರರು ಪ್ರಶಂಸೆ ಮಾಡಿದರೂ ತಾನು ಅರ್ಹಳಲ್ಲ ಎಂದು ಮನದಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಇಂಪೋಸ್ಟರ್ ಸಿಂಡ್ರೋಮ್ ಎಂದು ಕರೆಯುತ್ತಾರೆ.

ಈ ರೀತಿಯ ಆಲೋಚನೆಯೂ ಖಾಲಿತನ ಹಾಗು ಖಿನ್ನತೆಗೆ ಕಾರಣವಾಗುತ್ತದೆ. ಏನು ಮಾಡಿದರು ತೃಪ್ತಿ ಎಂಬುದಿಲ್ಲ. ಜಗತ್ತೆಲ್ಲ ಅವರ ಸಾಧನೆಯನ್ನು ಕೊಂಡಾಡಿದರೂ ಅವರಿಗೆ ಸಾಧಿಸಿದ ಅನುಭವವಿರುವುದಿಲ್ಲ. ಇದು ನಿರ್ಲಿಪ್ತತೆ ಅಲ್ಲ. ಇವರು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ, ವೇದನೆಯನ್ನು ಅನುಭವಿಸುತ್ತಿರುತ್ತಾರೆ. ಇವರು ನಕಾರಾತ್ಮಕ ವ್ಯಕ್ತಿಯಾಗಿ ಬಿಡುತ್ತಾರೆ. ಕೆಲವರು ಎಷ್ಟೇ ಅಚ್ಚುಕಟ್ಟಾಗಿ ಕೆಲಸ ಮಾಡಿದರು ಅವರು ಮಾಡಿದ ಕೆಲಸ ಸರಿ ಇಲ್ಲವೆಂದು ಕೊರಗುತ್ತಾರೆ. ಎಷ್ಟು ಸಾಧಿಸಿದರು ಸಾಧಿಸಿಲ್ಲವೆಂಬ ಭಾವ. ಈ ತರಹದ ಮನಸ್ಥಿತಿ ಇದ್ದರೆ ಕೂಡಲೇ ಸರಿ ಮಾಡಿ. ಮುಂದೆ ಅದು ಖಿನ್ನತೆಗೆ ಕಾರಣವಾಗಬಹುದು. ಇದಕ್ಕೆ ಕಾರಣಗಳು- ಅತಿಯಾದ ಅಪೇಕ್ಷೆ ಇಟ್ಟುಕೊಳ್ಳುವುದು, ಇತರರ ಜೊತೆ ಹೋಲಿಸುವುದು, ಕೀಳರಿಮೆ, ಪರ್ಫೆಕ್ಟ್ ಮನುಷ್ಯನಾಗಬೇಕೆಂಬ ಹಂಬಲ, ಚಿಕ್ಕ ವಿಷಯಕ್ಕೆ ಆತಂಕ ಪಡುವುದು, ಸಾಮಾಜಿಕ ಒತ್ತಡ ಮುಂತಾದವುಗಳು.

ಏನು ಮಾಡಬೇಕು? ನಮ್ಮ ಆಲೋಚನೆಗಳನ್ನು ಬದಲಿಸಬೇಕು. ನಕಾರಾತ್ಮಕದಿಂದ ಸಕಾರಾತ್ಮಕ ಆಲೋಚನೆಯ ಕಡೆಗೆ ಮನಸ್ಸನ್ನ ತಿರುಗಿಸುವುದು. ಇರುವುದರಲ್ಲಿ ತೃಪ್ತಿಪಡುವ ಮನೋಭಾವ ಬೆಳೆಸಬೇಕು. ಇತರರ ಜೊತೆ ಹೋಲಿಸಬಾರದು. ತನ್ನ ಕೆಲಸ ಸಂತೋಷಪಟ್ಟು ಮಾಡಬೇಕು. ನಮ್ಮ ಕೆಲಸ ಸುಧಾರಿಸಬೇಕೇ ವಿನಃ ಸರಿಯಾಗಿ ಆಗಲೇಬೇಕು ಎಂದು ಒತ್ತಾಯ ಮಾಡಬೇಡಿ. ಆತ್ಮವಿಶ್ವಾಸದ ಕೊರತೆ ಇದ್ದರೆ ನಿಮ್ಮ ಒಳ್ಳೆಯ ಸ್ವಭಾವದ ಬಗ್ಗೆ ಕೌಶಲ್ಯದ ಬಗ್ಗೆ ಹೆಮ್ಮೆಪಡಿ. ಇತರರು ಪ್ರಶಂಸಿಸುವಾಗ ಸ್ವೀಕರಿಸಿ. ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ. ಯಶಸ್ಸೆ ಜೀವನವಲ್ಲ. ಏನೇ ಸಾಧಿಸದೆ ಸಂತೃಪ್ತಿಯ ಜೀವನ ನಡೆಸಿದವರು ಎಷ್ಟೋ ಮಂದಿ ಇದ್ದಾರೆ. ಜೀವನವೆಂಬುದು ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ಇರುತ್ತದೆಯೇ ವಿನಹ ಯಶಸ್ಸಿನ ಮೇಲಲ್ಲ.

-ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಾರಕೂರು ಕಾಲೇಜು: ಕನಕದಾಸ ಜಯಂತಿ

ಬಾರಕೂರು, ನ.21: ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಸರಕಾರಿ ಪ್ರಥಮ...

ಪ್ರೊಫೆಶನಲ್ ಕೋರ್ಸ್ಗಳು ವಿದ್ಯಾರ್ಥಿಗಳಿಗೆ ಬಹುಮುಖ್ಯ: ಚಂದನ್ ರಾವ್

ಮಣಿಪಾಲ, ನ.21: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪ್ರೊಫೆಶನಲ್ ಕೋರ್ಸ್ಗಳು ಬಹಳ...

ನ.25: ಅರ್ಚನ ಎಂ.ಸಿ ಅವರ ನೃತ್ಯಶಂಕರ ಕಾರ್ಯಕ್ರಮ

ಉಡುಪಿ, ನ.21: ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು...
error: Content is protected !!