Wednesday, October 30, 2024
Wednesday, October 30, 2024

ಉಡುಪಿ ಜ್ಞಾನಸುಧಾದಲ್ಲಿ ‘ಕೃಷ್ಣಾಪುರ ಸಭಾಂಗಣ’ ಉದ್ಘಾಟನೆ

ಉಡುಪಿ ಜ್ಞಾನಸುಧಾದಲ್ಲಿ ‘ಕೃಷ್ಣಾಪುರ ಸಭಾಂಗಣ’ ಉದ್ಘಾಟನೆ

Date:

ಉಡುಪಿ, ಅ.29: ಉಡುಪಿ ಜ್ಞಾನಸುಧಾದಲ್ಲಿ ನೂತನವಾಗಿ ನಿರ್ಮಾಣವಾದ ‘ಕೃಷ್ಣಾಪುರ ಸಭಾಂಗಣ’ ಮತ್ತು ಗ್ರಂಥಾಲಯದ ಉದ್ಘಾಟನೆಯನ್ನು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ನೆರವೇರಿಸಿ, ಆಶೀರ್ವಚನ ನೀಡಿದರು. ಭಗವದ್ಗೀತೆಯು ನಮ್ಮ ಆಂತರಿಕ ಶುದ್ಧತೆಗೆ ಕಾರಣವಾಗುತ್ತದೆ. ಮನೋನಿಗ್ರಹದಿಂದ ಎಲ್ಲಾ ಸಾಧನೆ ಸಾಧ್ಯ. ಈ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಉತ್ತಮ ಸಂಕಲ್ಪದಿಂದ ಆರಂಭಿಸಿದ ಈ ಶೈಕ್ಷಣಿಕ ಮತ್ತು ಧಾರ್ಮಿಕ ಕೈಂಕರ್ಯ ಶ್ಲಾಘನೀಯ ಎಂದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜು ನಾಗಬನ ಕ್ಯಾಂಪಸ್‌ನಲ್ಲಿ ಸ್ಥಾಪನೆಯಾಗಲು ಸ್ಥಳವನ್ನು ನೀಡಿದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರಿಗೆ ಕೃತಜ್ಞತೆಯನ್ನು ಅರ್ಪಿಸಿದರು. ಆ ಸವಿನೆನಪಿಗಾಗಿ ‘ಕೃಷ್ಣಾಪುರ ಸಭಾಂಗಣ’ ನಿರ್ಮಾಣವಾಗಿ ಸ್ವಾಮೀಜಿಯವರಿಂದಉದ್ಘಾಟನೆಗೊಂಡಿತು. ಅವರ ಆಶೀರ್ವಾದ ವಿದ್ಯಾರ್ಥಿಗಳಿಗೆ ಶ್ರೀರಕ್ಷೆಯಾಗಿ ನಮ್ಮೆಲ್ಲರಿಗೆ ಅವರ ಜೀವನ ಮೌಲ್ಯಗಳು ಆದರ್ಶವಾಗಲಿ ಎಂದು ಹಾರೈಸಿದರು.

ನಾಗಬನದಲ್ಲಿ ಶ್ರೀ ನಾಗದೇವರ ಆಶ್ಲೇಷ ಬಲಿ, ನಾಗಸಮಾರಾಧನೆ, ನವಕ ಪ್ರಧಾನ ಹೋಮ, ಗಣಹೋಮ, ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನಸಂತರ್ಪಣೆ ನಡೆಯಿತು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿಗಳಾದ ವಿದ್ಯಾವತಿ ಸುಧಾಕರ ಶೆಟ್ಟಿ, ಅನಿಲ್ ಕುಮಾರ್ ಜೈನ್, ಸಿ.ಎ.ನಿತ್ಯಾನಂದ ಪ್ರಭು, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರು, ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಸಂತೋ಼ಷ್, ಮಣಿಪಾಲ ಜ್ಞಾನಸುಧಾ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್, ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು ಮುಂತಾದವರು ಉಪಸ್ಥಿತರಿದ್ದರು. ಮಣಿಪಾಲ ಜ್ಞಾನಸುಧಾದ ಆಂಗ್ಲ ಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೈಂದೂರು ಉತ್ಸವದಲ್ಲಿ ಸಂಜೀವಿನಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ

ಉಡುಪಿ, ಅ.29: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ, ಜಿಲ್ಲಾ...

ಆಳ್ವಾಸ್ ಆಧುನಿಕ ನಲಂದಾ ವಿಶ್ವವಿದ್ಯಾಲಯ: ವೀರಪ್ಪ ಮೊಯಿಲಿ

ವಿದ್ಯಾಗಿರಿ, ಅ.29: ಆಳ್ವಾಸ್ ಶಿಕ್ಷಣ ಸಂಸ್ಥೆಗಳು 'ಆಧುನಿಕ ನಲಂದಾ ವಿಶ್ವವಿದ್ಯಾಲಯ'.ಎಂದು ಮಾಜಿ...

ಇಂದಿನ (ಅ.29) ಚಿನ್ನದ ದರ

ಚಿನ್ನ (22K/916) ರೂ. 7375 ಚಿನ್ನ - 8 ಗ್ರಾಂ- ರೂ. 59000
error: Content is protected !!