Sunday, October 13, 2024
Sunday, October 13, 2024

ಕೋಟ ಅಮೃತೇಶ್ವರಿ ದೇಗುಲದಲ್ಲಿ ವೈಭವದ ಶರನ್ನವರಾತ್ರಿ ಸಂಪನ್ನ

ಕೋಟ ಅಮೃತೇಶ್ವರಿ ದೇಗುಲದಲ್ಲಿ ವೈಭವದ ಶರನ್ನವರಾತ್ರಿ ಸಂಪನ್ನ

Date:

ಕೋಟ, ಅ.12: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ ಶನಿವಾರ ವಿಜಯದಶಮಿಯಂದು ಸಂಪನ್ನಗೊಂಡಿತು. ದೇಗುಲದಲ್ಲಿ ಪೂರ್ವಾಹ್ನದಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನವರಾತ್ರಿ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಕೋಟದ ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಕುಟುಂಬಿಕರು ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮದಲ್ಲಿ ಸೇವಾಕರ್ತರಾಗಿ ಭಾಗಿಯಾದರು.

ದೇಗುಲದ ಧಾರ್ಮಿಕ ವಿಧಿವಿಧಾನಗಳು ವೇ.ಮೂ ಮಧುಸೂಧನ ಬಾಯರಿ ಪರವಾಗಿ ಚಂದ್ರಶೇಖರ್ ಮಯ್ಯ ಸಾರಥ್ಯದಲ್ಲಿ ಜರಗಿತು. ದೇಗುಲದ ಆಡಳಿತ ಮಂಡಳಿಯ ಸದಸ್ಯರು ಕುಂದರ್ ಕುಟುಂಬಕ್ಕೆ ಪ್ರಸಾದ ವಿತರಿಸಿ ಗೌರವಿಸಿದರು. ದೇವಿಯ ಹತ್ತನೆ ದಿನದ ಸಿಂಹವಾಹಿನಿ ಅವತಾರದಲ್ಲಿ ಪುಷ್ಪಾಲಂಕಾರ ಸಹಸ್ರಾರು ಭಕ್ತರ ಗಮನ ಸೆಳೆಯಿತು ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಾಜಿ ಟ್ರಸ್ಟಿ, ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ ವರ್ಗ, ದೇಗುಲ ಅರ್ಚಕ ವೃಂದ ಉಪಸ್ಥಿತರಿದ್ದರು. ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ಇದೇ ಮೊದಲು ಎಂಬಂತೆ ಸುಮಾರು ಆರು ಸಾವಿರಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದರು. ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಭಾಗಿಯಾದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಹಿಳಾ ಪೌರ ಕಾರ್ಮಿಕರ ಪಾದಪೂಜೆ

ತುಮಕೂರು, ಅ.12: ತುಮಕೂರಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಶಕ್ತಿ ಮಾತೆ ಶ್ರೀ ಮಹಾಲಕ್ಷ್ಮೀ...

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ನೋಂದಣಿ ಆರಂಭ

ನವದೆಹಲಿ, ಅ.12: ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗಾಗಿ ಶನಿವಾರ ಸಂಜೆ ಆನ್‌ಲೈನ್...

ಮಣಿಪಾಲ ಜ್ಞಾನಸುಧಾ: ಶಾರದಾ ಪೂಜೆ

ಮಣಿಪಾಲ, ಅ.12: ಅಕ್ಟೋಬರ್‌ 12ರಂದು ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾನಗರದಲ್ಲಿ...

ಪಾಂಡೇಶ್ವರ ಶಾರದೋತ್ಸವ: ಸಾಧಕರಿಗೆ ಸಮ್ಮಾನ

ಕೋಟ, ಅ.12: ಶರನ್ನವರಾತ್ರಿ ಉತ್ಸವದ ಮೂಲಕ ಧಾರ್ಮಿಕತೆಯ ಕೇಂದ್ರವಾಗಿಸಿಕೊಂಡು ಪ್ರಕೃತಿಯನ್ನು ಆರಾಧಿಸುವ...
error: Content is protected !!