Tuesday, October 8, 2024
Tuesday, October 8, 2024

ವಿದ್ಯಾರ್ಥಿಗಳಿಗೆ ವೀರಗಾಥಾ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ವೀರಗಾಥಾ ಕಾರ್ಯಕ್ರಮ

Date:

ಉಡುಪಿ, ಅ.8: ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶಪ್ರೇಮ ಮತ್ತು ದೇಶ ಭಕ್ತರ ಕುರಿತು ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಇಲಾಖೆಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾ ರೂಪದಲ್ಲಿ ವೀರಗಾಥಾ 4.0 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಕವನ ರಚನೆ, ಪ್ರಬಂಧ ರಚನೆ, ಚಿತ್ರಕಲೆ ಮತ್ತು ಬಹುಮಾಧ್ಯಮ ಪ್ರಸ್ತುತಿಯಲ್ಲಿ ಸ್ಪರ್ಧೆಗಳು ನಡೆಯಲಿವೆ. 3 ರಿಂದ 12 ನೇ ತರಗತಿಗಳ ಎಲ್ಲಾ ಮಾಧ್ಯಮ ಮತ್ತು ಪಠ್ಯಕ್ರಮಗಳ ವಿದ್ಯಾರ್ಥಿಗಳು ಸ್ಪರ್ಧಾ ವಿಷಯಗಳಿಗೆ ಸಂಬಂಧಿಸಿದ ತಮ್ಮ ಕೃತಿಯನ್ನು ತಯಾರಿಸಿ, ಅಕ್ಟೋಬರ್ 15 ರ ಒಳಗಾಗಿ https:// gallantryawards.gov.in/ ನಲ್ಲಿ ಸಲ್ಲಿಸಬಹುದಾಗಿದೆ. ಸ್ಪರ್ಧೆಯ ವಿಜೇತರುಗಳಿಗೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಹುಮಾನಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://mygov.in/veer-gatha4/ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇ-ಖಾತಾ ಸಂಬಂಧಿತ ಗೊಂದಲಗಳಿಗೆ ವಾರದೊಳಗೆ ಪರಿಹಾರ

ಬೆಂಗಳೂರು, ಅ.8: ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿದ್ದು, ಅವುಗಳನ್ನು ಒಂದು ವಾರದಲ್ಲಿ...

ದಸರಾ ಪ್ರಯುಕ್ತ 2000 ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು, ಅ.8: ದಸರಾ ಮಹೋತ್ಸವದ ಹಿನ್ನೆಲೆ ಕೆಎಸ್‌ಆರ್‌ಟಿಸಿ 2000ಕ್ಕೂ ಅಧಿಕ ವಿಶೇಷ...

ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ (ಕಡಿಮೆಗೊಳಿಸುವ) ದಿನದ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟನೆ

ಮಣಿಪಾಲ, ಅ.8: ಮಣಿಪಾಲದ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಅಂತರಾಷ್ಟ್ರೀಯ ವಿಪತ್ತು...

ಸಿಒಡಿಪಿ: ಮಕ್ಕಳ ಶಿಬಿರ

ಮಂಗಳೂರು, ಅ.8: ಮಂಗಳೂರು ಧರ್ಮಪ್ರಾಂತ್ಯದ ಸಿಒಡಿಪಿ ಸೇವಾ ಸಂಸ್ಥೆಯಲ್ಲಿ ಮಕ್ಕಳ ಶಿಬಿರ...
error: Content is protected !!