ಮಂಗಳೂರು, ಅ.8: ಮಂಗಳೂರು ಧರ್ಮಪ್ರಾಂತ್ಯದ ಸಿಒಡಿಪಿ ಸೇವಾ ಸಂಸ್ಥೆಯಲ್ಲಿ ಮಕ್ಕಳ ಶಿಬಿರ ಏರ್ಪಡಿಸಲಾಗಿತ್ತು. ಮಕ್ಕಳ ಶೈಕ್ಷಣಿಕ ದತ್ತು ನಿಧಿ ಯೋಜನೆಯಡಿ 203 ಮಕ್ಕಳು ಶಿಬಿರದ ಪ್ರಯೋಜನವನ್ನು ಪಡೆದರು. ಸಿಒಡಿಪಿ ಸಂಸ್ಥೆಯ ನಿರ್ದೇಶಕ ಫಾ| ವಿನ್ಸೆಂಟ್ ಡಿ ಸೋಜರವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಪನ್ಮೂಲ ವ್ಯಕ್ತಿಗಳಾದ ಶರಲ್ ಮತ್ತು ಶರ್ಮಿಳಾ ಪ್ರಸುತ್ತ ವಿಷಯಗಳ ಬಗ್ಗೆ, ಕಲಿಯುವ ಮತ್ತು ಗ್ರಹಿಸುವ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಿದರು. ಕದ್ರಿ ಪೋಲಿಸ್ ಠಾಣೆಯ ನಿರೀಕ್ಷಕರು ಮತ್ತು ಉಪ ನಿರೀಕ್ಷಕರು ಮಕ್ಕಳ ಸುರಕ್ಷತೆಯ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದರು. ಡ್ರಗ್ಸ್ ದಂಧೆ, ಮಕ್ಕಳ ವಿರುದ್ಧ ನಡೆಯುವ ಲೈಗಿಂಕ ಆರೋಪಗಳ ಬಗ್ಗೆ ಕದ್ರಿ ಠಾಣೆಯ ನಿರೀಕ್ಷಕ ಸೋಮಶೇಖರ್ ಮಾಹಿತಿ ನೀಡಿದರು ಮತ್ತು ಉಪ ನಿರೀಕ್ಷಕಿ ಪ್ರತಿಭಾ ಮೊಬೈಲ್ ಸದ್ಬಳಕೆಯ ಬಗ್ಗೆ ಜಾಗೃತಿ ನೀಡಿದರು. ಯೋಜನೆಯ ಸಂಯೋಜಕಿ ಡೋರಿಸ್ ಲೆನೆಟ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಪ್ರಿಯಾ ವಂದಿಸಿದರು.
ಸಿಒಡಿಪಿ: ಮಕ್ಕಳ ಶಿಬಿರ
ಸಿಒಡಿಪಿ: ಮಕ್ಕಳ ಶಿಬಿರ
Date: