Sunday, October 6, 2024
Sunday, October 6, 2024

ರಜಾ ಸಂಸ್ಕಾರ ಶಿಬಿರ ಸಮಾರೋಪ

ರಜಾ ಸಂಸ್ಕಾರ ಶಿಬಿರ ಸಮಾರೋಪ

Date:

ಕೋಟ, ಅ.5: ಶಿಬಿರಗಳು ಅರ್ಥಪೂರ್ಣವಾಗಬೇಕು, ಅದು ಕೇವಲ ದೈಹಿಕವಲ್ಲದೆ ಮನೋವಿಕಾಸಕ್ಕೆ ನಾಂದಿಯಾಗಬೇಕು ಎಂದು ಶ್ರೀ ರಾಮಾಮೃತ ಭಜನಾ ಸಂಘ ಕೋಟ ಇದರ ಮುಖ್ಯಸ್ಥ ಪ್ರವೀಣ್ ಕುಂದರ್ ಹೇಳಿದರು ಕೋಟದ ಸೇವಾಸಂಗಮ ಶಿಶು ಮಂದಿರಲ್ಲಿ ಮೂರು ದಿನಗಳ ಕಾಲ ನಡೆದ ರಜಾ ಸಂಸ್ಕಾರ ಶಿಬಿರದಲ್ಲಿ ಅವರು ಮಾತನಾಡಿದರು. ಶಿಬಿರದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಮನೋವಿಕಾಸಕ್ಕೆ ಬೇಕಾದ ಕೆಲ ಮಾಹಿತಿಗಳನ್ನು ಮಕ್ಕಳಿಗೆ ನೀಡಲಾಯಿತು. ಸುಮಾರು 60 ಕ್ಕೂ ಅಧಿಕ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಣ ತಜ್ಞ ಸಂಜೀವ ಗುಂಡ್ಮಿ, ಅಂಗನವಾಡಿ ಶಿಕ್ಷಕಿಯರಾದ ಯಮುನಾ ಕುಂದರ್, ಜಯಲಕ್ಷ್ಮಿ, ಪ್ರಜ್ಞಾ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಪೂಜಾ ಭಟ್, ಪ್ರಕಾಶ್ ಭಟ್, ಪ್ರವೀಣ್ ಕುಂದರ್ ಭಾಗಿಯಾಗಿದರು. ಸಮಾರೋಪ ಸಮಾರಂಭದಲ್ಲಿ ಕೋಟ ಸೇವಾ ಸಂಗಮ ಶಿಶು ಮಂದಿರದ ಅಧ್ಯಕ್ಷೆ ನಾಗಲಕ್ಷ್ಮಿ ಹೆಗ್ಡೆ, ಉಪಾಧ್ಯಕ್ಷೆ ಗೀತಾ ಎ ಕುಂದರ್, ಸಮಿತಿಯ ಸದಸ್ಯರಾದ ಸಂತೋಷ್ ಪ್ರಭು, ಪ್ರಮೀಳಾ, ರವೀಂದ್ರ ಕೋಟ, ಮಾತಾಜಿ ಸಂಗೀತ, ಹಿಂದಿನ ಮಾತಾಜಿ ದೀಪಾ ಎಸ್ ಆಚಾರ್, ಸಹಾಯಕಿ ಜ್ಯೋತಿ ಉಪಸ್ಥಿತರಿದ್ದರು. ಶಿಶು ಮಂದಿರದ ಕಾರ್ಯದರ್ಶಿ ಸುಷ್ಮಾ ದಯಾನಂದ್ ವಂದಿಸಿದರು. ವ್ಯವಸ್ಥಾಪಕಿ ಭಾಗ್ಯ ವಾದಿರಾಜ್ ಶಿಬಿರ ಸಂಯೋಜಿಸಿ ನಿರೂಪಿಸಿದರು. ಶಿಬಿರಾರ್ಥಿ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.9: ಮಣಿಪಾಲದಲ್ಲಿ ಮಿನಿ ಉದ್ಯೋಗ ಮೇಳ

ಉಡುಪಿ, ಅ.5: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಅಕ್ಟೋಬರ್...

ಉಚ್ಚಿಲ ದಸರಾ- ಚಿತ್ರ ಬಿಡಿಸುವ ಸ್ಪರ್ಧೆ

ಉಚ್ಚಿಲ, ಅ.5: ಕಳೆದ 3 ವರ್ಷಗಳಿಂದ ನಿರಂತರವಾಗಿ ಉಚ್ಚಿಲ ದಸರಾ ಮಹೋತ್ಸವ...

ಬ್ರಹ್ಮಗಿರಿ: ವನಮಹೋತ್ಸವ ಮತ್ತು ಸ್ವಚ್ಛತಾ ಕಾರ್ಯಕ್ರಮ

ಉಡುಪಿ, ಅ.5: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಮಹಿಳಾ...

ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ

ಉಡುಪಿ, ಅ.5: ಪ್ರಸಕ್ತ ಸಾಲಿನಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡಿಸ್ಟೊಫಿ, ಪಾರ್ಕಿನ್ಸನ್...
error: Content is protected !!