ಬಾರಕೂರು, ಅ. 5: ಇಲ್ಲಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ ಎನ್ಎಸ್ಎಸ್ ದಿನಾಚರಣೆ ಮತ್ತು 2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಪ್ರಭಾರ ಪ್ರಾಂಶುಪಾಲ ನಿರಂಜನ ಶರ್ಮ ಅವರ ಅಧ್ಯೆಕ್ಷತೆಯಲ್ಲಿ ಕಾಲೇಜಿನ ಎವಿ ಹಾಲ್ ನಲ್ಲಿ ಸೆಪ್ಟೆಂಬರ್ 30ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರು, ಎಸ್ಎಂಎಸ್ ಕಾಲೇಜು ಬ್ರಹ್ಮಾವರ, ಎನ್ಎಸ್ಎಸ್ ನಲ್ಲಿ ಸ್ವಯಂ ಸೇವಕರ ಜವಾಬ್ದಾರಿ ಮತ್ತು ಎನ್ಎಸ್ಎಸ್ ನಲ್ಲಿ ಭಾಗಿಯಾಗಿದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿಶ್ಲೇಷಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷರಾದ ನಿರಂಜನ ಶರ್ಮಾರವರು ಎನ್ಎಸ್ಎಸ್ ನ ವಾರ್ಷಿಕ ಚಟುವಟಿಕೆಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮಧಿಕಾರಿ, ರಾಧಾಕೃಷ್ಣ ನಾಯಕ್ ರವರು ಪ್ರಾಸ್ತಾವಿಕ ನುಡಿಯಲ್ಲಿ ಮುಂದಿನ ಚಟುವಟಿಕೆಗಳ ಕಾರ್ಯಸೂಚಿಯ ಬಗ್ಗೆ ಚರ್ಚಿಸಿದರು. ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಗಂಗಾಧರ್ ಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಐಕ್ಯೂಎಸಿ ಸಂಚಾಲಕಿ ವಿದ್ಯಾ ಪಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ಶೈಲಜಾ ಶೆಡ್ತಿ ಉಪಸ್ಥಿತರಿದ್ದರು. ಶೈಕ್ಷಣಿಕ ವರ್ಷದ ಎನ್ಎಸ್ಎಸ್ ವಿದ್ಯಾರ್ಥಿ ನಾಯಕರನ್ನು ನೇಮಿಸಿ ಅಧಿಕಾರ ವರ್ಗಾಯಿಸಲಾಯಿತು. ವರ್ಗಾವಣೆಗೊಂಡ ಕಾರ್ಯಕ್ರಮಧಿಕಾರಿ ಶೃತಿ ಆಚಾರ್ಯರನ್ನು ಸನ್ಮಾನಿಸಲಾಯಿತು.