ಹೂಡೆ, ಅ.2: ರೋಟರಿ ಜಿಲ್ಲೆ 3182 ಇದರ ಮಹತ್ವದ ಯೋಜನೆ ಕೋಸ್ಟ್ ಟೂ ಕೋಸ್ಟ್ 3.0 ಕಾರ್ಯಕ್ರಮದ ಭಾಗವಾಗಿ, ರೋಟರಾಕ್ಟ್ ಕ್ಲಬ್ ಉಡುಪಿಯ ಕಾರ್ಯಕರ್ತರು ಹೂಡೆ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ರೋಟರಾಕ್ಟ್ ಕ್ಲಬ್ ಉಡುಪಿ, ರಾಷ್ಟ್ರೀಯ ಸೇವಾ ಯೋಜನೆ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಘಟಕ ಹಾಗು ಎನ್ ಸಿ ಸಿ ಘಟಕ ಎಂಜಿಎಂ ಕಾಲೇಜು ಇವರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಸುಕನ್ಯಾ ಮೇರಿ ಇವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಎಲ್ಲಾ ವಿದ್ಯಾರ್ಥಿಗಳಿಗೆ ಹಾಗು ಕಾರ್ಯಕರ್ತರಿಗೆ ಸ್ವಚ್ಛತಾ ದೀಕ್ಷೆಯನ್ನು ಬೋಧಿಸಿದರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಉಪನ್ಯಾಸಕರಾದ ಪ್ರಜ್ಞಾ ಮಾರ್ಪಳ್ಳಿ, ಚಿರಂಜಿತ್, ಎನ್ ಸಿ ಸಿ ಕೆಡೆಟ್ ಆದ ಆಕಾಂಕ್ಷಾ ಹಾಗು ಸಾತ್ವಿಕ್, ರೋಟರಾಕ್ಟ್ ಕ್ಲಬ್ ಉಡುಪಿ ಅಧ್ಯಕ್ಷರಾದ ಅಂಶ್ ಕೋಟ್ಯಾನ್, ಕಾರ್ಯದರ್ಶಿ ಅನಂತ ಕೃಷ್ಣ ಹಾಗು ರೋಟರಿ ಉಡುಪಿಯ ರೋಟರಾಕ್ಟ್ ಚೇರ್ಮನ್ ಆದ ಬಿಕೆ ನಾರಾಯಣ್ ರವರು ಉಪಸ್ಥಿತರಿದ್ದರು. ಒಟ್ಟು 75 ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿ 30 ಚೀಲಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಿದರು.