Thursday, October 3, 2024
Thursday, October 3, 2024

ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಾಣ

ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಾಣ

Date:

ಬೆಂಗಳೂರು, ಅ.2: ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮ್‌ ಸಿಟಿ ಮಾದರಿಯಲ್ಲೇ ಚಿತ್ರನಗರಿ ನಿರ್ಮಾಣವಾಗಬೇಕು. ಚಿತ್ರೋದ್ಯಮದವರಿಂದ ಸಲಹೆ ಸೂಚನೆಗಳನ್ನು ಪಡೆಯಬೇಕು. ಚಿತ್ರನಗರಿಯಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಬೇಕು. ಸಿನಿಮಾ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳು ಇಲ್ಲಿ ಲಭ್ಯವಿರಬೇಕು. ಆದ್ದರಿಂದ ದೇಶದ ಪ್ರಮುಖ ಮೂರು ಚಿತ್ರ ನಗರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಚಿತ್ರನಗರಿಗಾಗಿ ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಈಗಾಗಲೇ ಗುರುತಿಸಲಾಗಿರುವ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 110 ಎಕರೆ ಭೂಮಿಯನ್ನು ತ್ವರಿತಗತಿಯಲ್ಲಿ ವಾರ್ತಾ ಇಲಾಖೆಗೆ ಹಸ್ತಾಂತರಿಸಬೇಕು. ಭೂಮಿ ವಶಕ್ಕೆ ಪಡೆದ ನಂತರ ತಕ್ಷಣವೇ ಟೆಂಡರ್‌ ಕರೆದು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು. ಮೂರು ವರ್ಷದೊಳಗೆ ಚಿತ್ರನಗರಿ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇರಾನ್‌ ಕ್ಷಿಪಣಿ ದಾಳಿ- ಭದ್ರತಾ ಮುಖ್ಯಸ್ಥರೊಂದಿಗೆ ಇಸ್ರೇಲ್ ಪ್ರಧಾನಿ ಮಹತ್ವದ ಸಭೆ

ಯು.ಬಿ.ಎನ್.ಡಿ., ಅ.2: ಇಸ್ರೇಲ್‌ನ ಮೇಲೆ ಇರಾನ್‌ನ ನಡೆಸಿದ ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ,...

ಹೂಡೆ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ

ಹೂಡೆ, ಅ.2: ರೋಟರಿ ಜಿಲ್ಲೆ 3182 ಇದರ ಮಹತ್ವದ ಯೋಜನೆ ಕೋಸ್ಟ್...

ವಿಜೃಂಭಣೆಯಿಂದ ನಡೆಯಲಿದೆ ಮೈಸೂರು ದಸರಾ

ಮೈಸೂರು, ಅ.2: ಅಕ್ಟೋಬರ್‌ 3 ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ...

ಬಿಪಿಎಲ್ ಮಾನದಂಡ ಪರಿಶೀಲನೆಗೆ ಸಮಿತಿ

ಬೆಂಗಳೂರು, ಅ.2: ಬಿಪಿಎಲ್‌ ಮಾನದಂಡಗಳ ಪರಿಶೀಲನೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ...
error: Content is protected !!