ಉಡುಪಿ, ಅ.1: ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಾಹಿತ್ಯ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಓದಿ ಬಹುಮಾನ ಗೆಲ್ಲಿ ಎಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ಪುಸ್ತಕ ಓದುವ ಹವ್ಯಾಸ ಬೆಳೆಸುವಲ್ಲಿ ಮಕ್ಕಳು ಪ್ರೇರಣೆ ಪಡೆಯುವ ಉದ್ದೇಶದಿಂದ ದಿವಂಗತ ಡಾ. ಉಪ್ಪಂಗಳ ರಾಮ ಭಟ್ಟರು ಬರೆದಿರುವ ಮರೆಯಲಾಗದ ಮಹನೀಯರು ಎಂಬ ಪುಸ್ತಕವನ್ನು ಆಧರಿಸಿ ‘ನಾ ಮೆಚ್ಚಿದ ವ್ಯಕ್ತಿತ್ವದ ಬಗ್ಗೆ’ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಸಲಾಯಿತು. ಶಂಕರಿ ಭಟ್ ಅವರು ಕಲಿಕೆಗೆ ಮಾಧ್ಯಮ ತೊಡಕಲ್ಲ, ಆಸಕ್ತಿಯಿಂದ ಕಲಿತು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ತಿಳಿಸಿದರು. ಇನ್ನೋರ್ವ ಅತಿಥಿ, ಎಸ್.ಡಿ.ಎಂ.ಸಿ ಗೌರವಾಧ್ಯಕ್ಷೆ ತಾರಾದೇವಿ ಇವರು ಓದಿ, ಜ್ಞಾನ ಗಳಿಸಿ, ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆ ನೀಡಿದರರು. ಈ ಎರಡೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈರ್ವರು ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು. ಸಂಸ್ಥೆಯ ಹಿರಿಯ ಶಿಕ್ಷಕಿ ಇಂದಿರಾ ಬಿ ಸ್ವಾಗತಿಸಿ, ಶಿಕ್ಷಕಿ ನಾಗರತ್ನ ಹೆಗಡೆ ನಿರೂಪಿಸಿ ವಂದಿಸಿದರು, ಶಿಕ್ಷಕಿಯರಾದ ಮೀನಾಕ್ಷಿ, ಪ್ರತಿಭಾ ಮತ್ತು ಮಂಜುಳಾ ಉಪಸ್ಥಿತರಿದ್ದರು.
ಪುಸ್ತಕ ಓದಿ ಬಹುಮಾನ ಗೆಲ್ಲಿ
ಪುಸ್ತಕ ಓದಿ ಬಹುಮಾನ ಗೆಲ್ಲಿ
Date: