Sunday, September 29, 2024
Sunday, September 29, 2024

ನಾನೇ ಅಡ್ಜಸ್ಟ್ ಮಾಡಿಕೊಳ್ಳುವುದು

ನಾನೇ ಅಡ್ಜಸ್ಟ್ ಮಾಡಿಕೊಳ್ಳುವುದು

Date:

ಸಂಜೆ ಡ್ಯೂಟಿ ಮುಗಿಸಿ ಮನೆಗೆ ಬಂದ ಹೆಂಡತಿ “ನಾನೇ ಎಲ್ಲ ಕೆಲಸ ಮಾಡಬೇಕು, ಇಲ್ಲಿ ಯಾರು ನನಗೆ ಸಹಾಯ ಮಾಡುವುದಿಲ್ಲ. ನಾನೇ ಎಲ್ಲರಿಗೆ ಅಡ್ಜಸ್ಟ್ ಆಗಬೇಕು ಬೇರೆಯವರು ಯಾರೂ ಅಡ್ಜಸ್ಟ್ ಮಾಡಿಕೊಳ್ಳುವುದಿಲ್ಲ” ಎಂದು ವಟ ವಟ ಮಾಡುತ್ತಾಳೆ. ಗಂಡ ಮನೆಗೆ ಬಂದ ತಕ್ಷಣ ಒಣಗಿದ ಬಟ್ಟೆಯನ್ನು ತೆಗೆದು ಮಡಚಿ ಕಪಾಟಿನೊಳಗೆ ಇಡುತ್ತಾನೆ ಆದರೂ ಇದನ್ನೆಲ್ಲಾ ಹೆಂಡತಿ ಗಮನಿಸುವುದಿಲ್ಲ. ಇದು ಗಂಡನೇ ಆಗಿರಬಹುದು ಅಥವಾ ಹೆಂಡತಿನೇ ಆಗಿರಬಹುದು. ಅಥವಾ ಯಾವುದೇ ಸಂಬಂಧದಲ್ಲೇ ಇರಲಿ. ನಾವೇ ಒಳ್ಳೆಯವರು ನಾವೇ ಎಡ್ ಜಸ್ಟ್ ಮಾಡಿಕೊಳ್ಳುವುದು ಎಂದು ನಂಬಿ ಬಿಡುತ್ತೇವೆ.

ನಾನೇ ಹೊಂದಿಕೊಳ್ಳಬೇಕು ಯಾವಾಗಲು, ಅವರು ಹೊಂದಿಕೊಳ್ಳುವುದಿಲ್ಲ ಎಂದು ನಾವು ಯಾವಾಗಲೂ ಗೋಳಾಡುತ್ತಾ ಇರುತ್ತೇವೆ. ನಿಜ ತಾನೆ?. ನಾವು ಅಜ್ಜಸ್ಟ್ ಆಗಿದ್ರಿಂದ ಈ ಸಂಬಂಧ ಇನ್ನೂ ಸರಿಯಾಗಿದೆ ಎಂದು ಅಂದುಕೊಳ್ಳುತ್ತೇವೆ. ನನ್ನಿಂದಲೇ ಎಲ್ಲಾ ಆಗೋದು ಎನ್ನುವ ಭ್ರಮೆಯಲ್ಲಿ ಸುತ್ತಾಡುತ್ತಿರುತ್ತೇವೆ. ಇತರರಿಗೂ ಹೇಳುತ್ತೇವೆ. ಇದು ಸಾಮಾನ್ಯ ಕಂಡುಬರುವ ದೃಶ್ಯ. ಇದರಿಂದ ಅಹಂ ಕೂಡ ನಮಗೆ ಅರಿವಾಗದೆ ಜೊತೆಗೆ ಬೆಳೆಯುತ್ತಾ ಹೋಗುತ್ತದೆ. ಸಂಬಂಧ ಯಾವುದೇ ಇರಲಿ ಅಜ್ಜಸ್ಟ್ ಆಗುವುದು ಮುಖ್ಯ ನಿಜ. ಆದರೆ ನಾನೇ ಹೊಂದಿಕೊಳ್ಳುವುದು, ಬೇರೆ ಯಾರೂ ಮಾಡಲ್ಲ ಎಂದು ನಂಬುವುದು ಹಿತವಲ್ಲ ಹಾಗು ನಿಜವೂ ಅಲ್ಲ. ಆ ಭಾವನೆ ಇಟ್ಟುಕೊಂಡು ಜೀವಿಸಿದರೆ ನಾವು ಯಾವತ್ತೂ ಖುಷಿಯಾಗಿರುವುದಿಲ್ಲ. ಹೊಂದಾಣಿಕೆ ಎಲ್ಲರೂ ಮಾಡುತ್ತಿರುತ್ತಾರೆ ಕೆಲವರು ಜಾಸ್ತಿ ಕೆಲವರು ಕಡಿಮೆ ಅಷ್ಟೇ. ಯೋಚಿಸಿ ನೋಡಿ. ನಮ್ಮ ಮನಸ್ಸು ಸ್ವಂತದ ಮೇಲೆ ಇಟ್ಟ ಪ್ರೀತಿ ಇನೋಬ್ಬರ ಮೇಲೆ ಇಡುವುದಿಲ್ಲ. ಇಲ್ಲಿ ಒಂದು ವಿಷಯ ಆಲೋಚನೆ ಮಾಡಿ. ಬೇರೆಯವರು ಅಡ್ಜಸ್ಟ್ ಮಾಡಿಲ್ಲ ಎಂದು ನಮಗೆ ಹೇಗೆ ಗೊತ್ತು?. ಅವರು ಕೂಡ ಮಾಡಿರಬಹುದು ನಾವು ಗಮನಿಸದೆ ಇರಬಹುದು ಅಲ್ಲವೇ? ಬೇರೆಯವರ ಹೊಂದಾಣಿಕೆಗೆ ನಾವು ಅಂಧರಾಗುತ್ತೇವೆ. ಅವರಿಗೆ ನೇರವಾಗಿ ಕೇಳಿ ನೋಡಿ ನೀವು ಅಡ್ಜಸ್ಟ್ ಮಾಡಿದ್ದೀರಾ ಎಂದು. ಆಗ ಅವರು ಎಷ್ಟು ಹೊಂದಾಣಿಕೆ ಮಾಡಿದ್ದಾರೆ ಎಂಬುದು ತಿಳಿಯುತ್ತದೆ.

ನಾವು ಜೀವನದಲ್ಲಿ ನಮ್ಮದೇ ಭ್ರಮಾಲೋಕದಲ್ಲಿ ತೇಲುತ್ತಾ ಇರುತ್ತೇವೆ. ಬೇರೆಯವರು ಮಾಡಿದ್ದು ತೋರುವುದೇ ಇಲ್ಲ. ನಾನೇ ಎಲ್ಲಾ ಹೊಂದಾಣಿಕೆ ಮಾಡುವುದು ಎನ್ನುವ ಅನಿಸಿಕೆ ಬೆಳೆದು ಬಿಟ್ಟಿರುತ್ತದೆ. ಇನ್ನೊಂದು ವಿಷಯ. ಹೊಂದಾಣಿಕೆ ನಾವೇ ಮಾಡ್ತಾ ಇರುವುದು ಎಂದುಕೊಳ್ಳೋಣ. ಯಾರಿಗೋಸ್ಕರ ನಾವು ಅಡ್ಜಸ್ಟ್ ಮಾಡಿಕೊಳ್ಳೋದು ಎಂಬುದು ನೆನಪಿರಲಿ. ನಮ್ಮ ಪ್ರೀತಿಯ ಜನರ ಜೊತೆ ಅಲ್ಲವೇ? ನಮಗೆ ಅವರು ಬೇಕು ಎನ್ನುವ ಉದ್ದೇಶವಿಟ್ಟುಕೊಂಡು ನಾವು ಹಾಗೆ ಮಾಡುವುದು ಅಲ್ಲವೇ. ಆದ್ದರಿಂದ ಇಲ್ಲಿ ಅಡ್ಜಸ್ಟ್ ಮೆಂಟ್ ಒಳ್ಳೆಯ ಕೆಲಸ ಆಯ್ತಲ್ಲ ಅದರಲ್ಲಿ ಬೇಸರ ಪಡುವುದು ಏನಿದೆ. ನಮಗೆ ಅವರು ಬೇಕು ಅಂತ ತಾನೇ ಅಡ್ಜಸ್ಟ್ ಮಾಡಿಕೊಳ್ಳುವುದು ಅದರಲ್ಲಿ ಹೇಳಲಿಕ್ಕೇನಿದೆ. ನಾವು ಹೇಳ್ತಾ ತಿರುಗುತ್ತಾ ತಿರುಗುತ್ತಾ ಇದ್ದೇವೆ ಎಂದಾದರೆ ಆ ವ್ಯಕ್ತಿಯ ಮೇಲೆ ನಮಗೆ ಪ್ರೀತಿ ಇಲ್ಲ ಎಂಬುದು ತಿಳಿಯುತ್ತದೆ. ಪ್ರೀತಿ ಇದ್ದವರ ಮೇಲೆ ಅಡ್ಜಸ್ಟ್ ಮಾಡಿಕೊಳ್ಳುವಾಗ ಅದು ಎಜ್ಜೆಸ್ಟ್ ಮಾಡಿಕೊಳ್ತಾ ಇದ್ದೇವೆ ಎಂದು ಅನ್ನಿಸುವುದೇ ಇಲ್ಲ. ಇನ್ನೊಂದು ಸರ್ತಿ ನಾನೇ ಎಜೆಸ್ಟ್ ಮಾಡಿಕೊಳ್ತಾ ಇದ್ದೇನೆ ಎಂದು ಆಲೋಚನೆ ಬಂದರೆ ಇದನ್ನೆಲ್ಲಾ ಮನನ ಮಾಡಿಕೊಳ್ಳಿ.

ಡಾ.ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಾಸ್ಕೆಟ್ ಬಾಲ್: ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಗಣಿತನಗರ, ಸೆ.28: ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ...

ಗುರುಪ್ರಸಾದ್ ಎ. ರವರಿಗೆ ಬೀಳ್ಕೊಡುಗೆ

ಮಣಿಪಾಲ, ಸೆ.28: ಸುಮಾರು 34 ವರ್ಷಗಳಿಂದ, ಮಣಿಪಾಲ ತಾಂತ್ರಿಕ ವಿದ್ಯಾಲಯದ ಇಲೆಕ್ಟ್ರಿಕಲ್...

ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಕಾಪು, ಸೆ.28: ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ ದಯಾಳ್...

ಸಾಹಿತ್ಯದ ಓದಿನಿಂದ ವಿಕಸನ: ರಾಜೇಂದ್ರ ಭಟ್ ಕೆ

ಕಾರ್ಕಳ, ಸೆ.28: ಸಾಹಿತ್ಯದ ಓದಿನಿಂದ ನಮ್ಮ ಭಾಷೆ ಶುದ್ಧವಾಗುವುದರಿಂದ ಸಂವಹನ ಸುಲಭವಾಗುತ್ತದೆ....
error: Content is protected !!