Saturday, November 23, 2024
Saturday, November 23, 2024

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು: ಡಾ.ಅಶೋಕ ಕಾಮತ್

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು: ಡಾ.ಅಶೋಕ ಕಾಮತ್

Date:

ಉಡುಪಿ, ಸೆ.20: ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಅವರ ಜಂಟಿ ಆಶ್ರಯದಲ್ಲಿ ನಡೆದ ಟೆಕ್ ಪ್ಲಸ್ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಉಡುಪಿ ಡಯಟ್ ನ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಮಾತನಾಡುತ್ತಾ, ಶಿಕ್ಷಕರು ಬದಲಾಗುವ ಪರಿಸ್ಥಿತಿಯಲ್ಲಿ ತಮ್ಮನ್ನು ಒಗ್ಗಿಸಿಕೊಂಡು ಸೂಕ್ತ ಜ್ಞಾನವನ್ನು ಪಡೆದು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕೆಂದು ಕರೆ ನೀಡಿದರು. ಉಡುಪಿ ಡಯಟ್ ಅನುದಾನ ರಹಿತ ಶಾಲಾ ಶಿಕ್ಷಕರಿಗೂ ತರಬೇತಿ ನೀಡುತ್ತಾ ಇದೆ. ಅದರ ಸಂಪೂರ್ಣ ಉಪಯೋಗ ಪಡೆಯುವಂತೆ ತಿಳಿಸಿದರು. ಪ್ರಾರಂಭದಲ್ಲಿ ಇನ್ನರ್ ವೀಲ್ ಅದ್ಯಕ್ಷೆ ಸುರೇಖ ಕಲ್ಕೂರ್ ಸ್ವಾಗತಿಸಿದರು. ಸೋದೆ ವಾದಿರಾಜ ಮಠ ಟ್ರಸ್ಟ್ ನ ಕಾರ್ಯದರ್ಶಿ ರತ್ನಕುಮಾರ್ ಉದ್ಘಾಟಿಸಿ ರೋಟರಿಯು ಇಂತಹ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಅಭಿನಂದಿಸಿ ಇದರ ಸಂಪೂರ್ಣ ಸದುಪಯೋಗ ಪಡೆಯುವಂತೆ ಕರೆ ನೀಡಿದರು. ರೋಟರಿ ಅದ್ಯಕ್ಷ ಗುರುರಾಜ ಭಟ್ ಸಹಕರಿಸಿದ ಎಲ್ಲರನ್ನೂ ಅಭಿವಂದಿಸಿ ಭವಿಷ್ಯದ ಪ್ರಜೆಗಳನ್ನು ಹೊಸ ತಂತ್ರಜ್ಞಾನದಲ್ಲಿ ಪರಿಣಿತರಾಗುವಂತೆ ಮಾಡುವ ನಮ್ಮ ಪ್ರಯತ್ನದಲ್ಲಿ ಎಲ್ಲರು ಸಹಕರಿಸಬೇಕೆಂದು ಕರೆ ನೀಡಿದರು. ವಲಯ ಸೇನಾನಿ ಹೇಮಂತಕಾಂತ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯದರ್ಶಿ ವೈಷ್ಣವಿ ಆಚಾರ್ಯ ವಂದಿಸಿದರು.

ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಶಬನಮ್ ಪ್ರವೀಣ್ ಶೇಖ್ ಇಂಗ್ಲೀಷ್ ವಿಷಯದ ಬಗ್ಗೆ, ಗಣೇಶ್ ಶಟ್ಟಿಗಾರ್ ಗಣಿತದ ಬಗ್ಗೆ ಮತ್ತು ಡಯಟ್ ನ ಉಪನ್ಯಾಸಕ ಯೋಗನಾರಸಿಂಹ ಅವರು ಶಿಕ್ಷಣ ದಲ್ಲಿ ತಂತ್ರಜ್ಞಾನ ದ ಉಪಯೋಗದ ಬಗ್ಗೆ ತರಬೇತಿ ನೀಡಿದರು. ಸಮಾರೋಪ ಸಮಾರಂಭದಲ್ಲಿ ರೂಪಾ ಕಿಣಿ ಮಾತಾಡುತ್ತಾ ಭಾಗವಹಿಸಿದ ಎಲ್ಲಾ ಶಿಕ್ಷಕರು ಇಲ್ಲಿ ಪಡೆದ ತರಬೇತಿಯ ಸಂಪೂರ್ಣ ಉಪಯೋಗ ಪಡೆದು ರೋಟರಿಯ ಈ ಪ್ರಯತ್ನದ ಯಶಸ್ಸಿನಲ್ಲಿ ಸಹಕರಿಸಬೇಕೆಂದು ಕರೆ ನೀಡಿದರು. ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆಯ ಅನಂತರಾಮ ಬಲ್ಲಾಳ, ಸುಬ್ರಹ್ಮಣ್ಯ ಕಾರಂತ್, ಪದ್ಮಿನಿ ಭಟ್, ಶುಭ ಬಾಸ್ರ್ರಿ, ಸಾಧನಾ ಮುಂಡ್ಕೂರ್, ವನಿತಾ ಉಪಾಧ್ಯಾಯ, ಶಾಲಿನಿ ರಾಘವೇಂದ್ರ ಮತ್ತು ಕಡಿಯಾಳಿ ಶಾಲೆಯ ಆಡಳಿತ ಅಧಿಕಾರಿ ಪ್ರಭಾವತಿ ಅಡಿಗ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!