ಕೋಟ, ಸೆ.18: ಅಚ್ಲಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸಾಮಾನ್ಯ ವಾರ್ಷಿಕ ಮಹಾಸಭೆ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಗುಂಡ ಶೆಟ್ಟಿ ಅಧ್ಯಕ್ಷತೆ ವಹಿಸಿ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಸಂಘವು 2,96,885.77 ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಹಾಲು ಉತ್ಪಾದಕರ ಬೋನಸ್ಸು 1,27,653.04 ರೂಪಾಯಿ, ಹಾಲಿನಿಂದ ಲಾಭ 20%ರಂತೆ 9,800 ರೂಪಾಯಿ ನೀಡುವುದೆಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ನ.30 ರಂದು ನಿವೃತ್ತಿ ಹೊಂದಲಿರುವ ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಅನಿಲ ಕುಮಾರ ಶೆಟ್ಟಿ ಇವರಿಗೆ ಸದಸ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಶಿರಿಯಾರ ವಿಎಸ್‌ಎಸ್‌ಎನ್ ಬ್ಯಾಂಕ್‌ನ ಸಿಇಓ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ನಮ್ಮ ಬ್ಯಾಂಕ್ ನಿಂದ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು ಅದನ್ನು ಸದಸ್ಯರು ಪಡೆಯುವಂತೆ ಕರೆ ನೀಡಿದರು.
ಸಭೆಯ ವಿಸ್ತಾರಣಾಧಿಕಾರಿ ಸರಸ್ವತಿ, ಮಾಜಿ ಅಧ್ಯಕ್ಷ ಬಿ ಭೋಜ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಂಜು ಮರಕಾಲ, ಸಂಘದ ಉಪಾಧ್ಯಕ್ಷ ಕೆ.ಗುಂಡು ಶೆಟ್ಟಿ, ನಿರ್ದೇಶಕರಾಗಿರುವ ಕೆ. ಲಕ್ಷಣ ಶೆಟ್ಟಿ, ವಿ.ವಿಠ್ಠಲ ಶೆಟ್ಟಿ, ಜಯಂತಿ ಶೆಟ್ಟಿ, ಅನಿತಾ ಶೆಟ್ಟಿ, ಗೀತಾ ಶೆಟ್ಟಿ, ಗಿರಿಜಾ, ಸಂಧ್ಯಾ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ ಪೂಜಾರಿ ಮತ್ತು ಸಿಬ್ಬಂದಿಗಳಾದ ಲಕ್ಷ್ಮಿ ದೇವಾಡಿಗ, ಶ್ರೀಮತಿ ಆಚಾರ್ ಉಪಸ್ಥಿತರಿದ್ದರು.