ಕಾರ್ಕಳ, ಸೆ.18: ಸ್ವಸಹಾಯ ಗುಂಪಿನ ಸದಸ್ಯರ ಒಗ್ಗಟ್ಟಿನಿಂದ ಶ್ರೀ ಕ್ಷೇತ್ರಕ್ಕೆ ಗೌರವ ಹೆಚ್ಚಾಗಿದೆ ಹಾಗೂ ಪಾರದರ್ಶಕತೆ ಸಹಾಭಾಗಿತ್ವ ಹೊಂದಾಣಿಕೆಯಿಂದ ಯೋಜನೆಯ ಬೆಳವಣಿಗೆಗೆ ಸಹಕರಿಸುತ್ತಿರುವ ಶ್ರೀ ವಾಣಿ ಸ್ವಸಹಾಯ ಸಂಘದಿಂದ ಗ್ರಾಮಾಭಿವೃದ್ಧಿ ಯೋಜನೆಗೆ ನೀಡುವ ಕೊಡುಗೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ರಿ. ಕಾರ್ಕಳ ತಾಲೂಕು ಯೋಜನಾಧಿಕಾರಿ ಹೇಮಲತಾ ಅಭಿಪ್ರಾಯಪಟ್ಟರು. ಅವರು ಯುವಕ ಮಂಡಲ ರಿ. ಸಾಣೂರು ಇದರ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ರಿ. ಕಾರ್ಕಳ ತಾಲೂಕು ಸಾಣೂರು ವಲಯದ ಶ್ರೀ ವಾಣಿ ಸ್ವಸಹಾಯ ಸಂಘದ 20 ನೇ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ನಡೆದ ನಡೆದ ಭಜನೆ ಪೂಜೆ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಣೂರು ವಲಯ ಮೇಲ್ವಿಚಾರಕರಾದ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿ ಭಜನೆಯಿಂದ ವಿಭಜನೆಯಿಲ್ಲ, ಮನಸ್ಸಿನ ನೆಮ್ಮದಿಗೆ ಭಜನೆ ಸಹಕಾರಿಯೆಂದರು. ಸಾಣೂರು ಬಿ ಒಕ್ಕೂಟದ ಶ್ರೀಮತಿ ಅರುಣಿ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ ರಿ ಸಾಣೂರು ಇದರ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಶುಭ ಹಾರೈಸಿದರು. ಸಾಣೂರು ಎ ಒಕ್ಕೂಟದ ಸೇವಾಪ್ರತಿನಿಧಿ ಪುಷ್ಪಲತಾ ರಾವ್, ಸಾಣೂರು ಎ ಒಕ್ಕೂಟದ ಕಾರ್ಯದರ್ಶಿ ಶಾಲಿನಿ ದೇವಾಡಿಗ ವೇದಿಕೆಯಲ್ಲಿದ್ದರು. ಶ್ರೀ ವಾಣಿ ಸ್ವಸಹಾಯ ಸಂಘದ ಯೋಗೀಶ್ ಸಾಲ್ಯಾನ್ ಪ್ರಾರ್ಥನೆಗೈದರು. ಸಾಣೂರು ಎ ಒಕ್ಕೂಟದ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಪೂಜಾರಿ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಶೆಟ್ಟಿ ವರದಿ ಮಂಡಿಸಿದರು. ಸದಸ್ಯರಾದ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಂಯೋಜಕ ಜಗದೀಶ್ ಕುಮಾರ್ ವಂದಿಸಿದರು. ಶ್ರೀವಾಣಿ ಸ್ವಸಹಾಯ ಸಂಘದ ಅನಿಲ್ ಕೋಟ್ಯಾನ್, ರಮೇಶ್ ಪೂಜಾರಿ, ಪ್ರಶಾಂತ್ ಆಚಾರ್ಯ, ಸ್ವಸ್ತಿಕ್ ಭಂಡಾರಿ ಸಹಕರಿಸಿದರು.