Friday, September 20, 2024
Friday, September 20, 2024

ಅಪರೂಪದ ಧೂಮಕೇತು ‘ಅಟ್ಲಾಸ್’

ಅಪರೂಪದ ಧೂಮಕೇತು ‘ಅಟ್ಲಾಸ್’

Date:

ಗ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಧೂಮಕೇತು ಬರಲಿದೆ. 2023 ರ ಜನವರಿಯಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿಮೀ ದೂರದಲ್ಲಿ ಮೊದಲು ನೋಡಿ ‘ಶತಮಾನದ ಧೂಮಕೇತು’ ಎಂದು ಇದನ್ನು ಬಣ್ಣಿಸಲಾಗಿತ್ತು. ಆದರೆ ಈಗ ಇದನ್ನು ‘ವರ್ಷದ ಧೂಮಕೇತು’ ಎಂದು ಅಂದಾಜಿಸಲಾಗಿದೆ. ಈ ಧೂಮಕೇತುವಿನ ಹೆಸರು ‘ಸುಚಿನ್ಸನ್ – ಅಟ್ಲಾಸ್’ (comet C/2023 A3 Tsuchinshan ATLAS) ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಗಣ್ಣಿಗೆ ಕಾಣಲಿದೆ ಎನ್ನಲಾಗಿದೆ. ಸೌರವ್ಯೂಹದ ಹೊರವಲಯ ಊರ್ಸ್ ಕ್ಲೌಡ್ ನಿಂದ (ಸುಮಾರು 3ಜ್ಯೋತಿರ್ವರ್ಷ =. 30 ಟ್ರಿಲಿಯನ್ ಕಿಮೀ) ದೂರದಿಂದ ಹೊರಟ ಈ ಧೂಮಕೇತು ಸೆಕೆಂಡಿಗೆ ಸುಮಾರು 80 ಕಿಮೀ ಅತ್ಯಂತ ವೇಗದಲ್ಲಿ ಕ್ರಮಿಸುತ್ತಾ ಈಗ ಸಪ್ಟಂಬರ್ 27 ರಂದು ಸೂರ್ಯನನ್ನು ಸಮೀಪಿಸುತ್ತಿದೆ.

ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು ಸೂರ್ಯನಿಂದ ಹಿಂತಿರುಗುವಾಗ ಅಕ್ಟೋಬರ್ ಸಂಜೆಯ ಪಶ್ಚಿಮ ಆಕಾಶದಲ್ಲಿ ಬರಿಗಣ್ಣಿಗೆ ಕಾಣಿಸಿ, ಆಕ್ಟೋಬರ್ 12 ರಂದು ಭೂವಿಗೆ ಸಮೀಪಿಸಲಿದೆ. 2023 ರ ಜನವರಿಯಲ್ಲಿ ಪ್ರಥಮ ದೂರದರ್ಶಕದಲ್ಲಿ ನೋಡಿ 2024 ಸಪ್ಟಂಬರ್ ಅಕ್ಟೋಬರ್ ಗೆ ಇದೊಂದು ಶತಮಾನದ ಧೂಮಕೇತುವಾಗಲಿದೆ ಎಂದು ಅಂದಾಜಿಸಿದ್ದರಾದರೂ ಈ ಪೆಭ್ರವರಿ 2024 ರ ಹೊತ್ತಿಗೆ ಇದು ಕಾಣೆಯಾದಾಗ ಇದು ಸಿಡಿದು ಹೋಯಿತು ಎನ್ನಲಾಯ್ತು. ಈಗ ಇದರ ತುಂಡೋ ಅಥವಾ ಮೂಲ ಧೂಮಕೇತುವೂ ಅಂತೂ ದೂರದರ್ಶಕಕ್ಕೆ ಪುನಃ ಗೋಚರಿಸಿದಾದ ‘ಬರಿಗಣ್ಣಿಗೆ ಕಾಣುವ ವರ್ಷದ ಧೂಮಕೇತುವಾಗಲಿದೆ’ ಎಂದು ಅಂದಾಜಿಸಲಾಗಿದೆ.

ಧೂಮಕೇತುಗಳೇ ಹೀಗೆ ಅಲೆಮಾರಿಗಳು. ಇವುಗಳ ಚಲನವಲನ ಹೀಗೆ ಎನ್ನುವಂತಿಲ್ಲ. ಇದು ಶತಮಾನದ ಧೂಮಕೇತುವಾಗಬಹುದೇ? ವರ್ಷದ ಧೂಮಕೇತುವೇ? ಅಥವಾ ಬರಿಗಣ್ಣಿಗೆ ಕಾಣಿಸುವುದೇ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಕೆಲ ದಿನಗಳಲ್ಲಿ ಉತ್ತರ ಸಿಗಲಿದೆ. ಶತಮಾನದ ಧೂಮಕೇತು Comet of the century ಅಂದರೆ ಅದು ಕೆಲ ತಿಂಗಳು ಆಕಾಶದಲ್ಲಿ ಬರೆಕಣ್ಣಿಗೆ ಕಂಡು ವಿಜೃಂಭಿಸುವ ಧೂಮಕೇತು. ವರ್ಷದ ಧೂಮಕೇತುವೆಂದರೆ ಬರೆ ಕಣ್ಣಿಗೆ ಕಾಣ ಸಿಗುವ ಧೂಮಕೇತು. ಈ ಹಿಂದೆ ಬಂದು ಬರಿಗಣ್ಣಿಗೆ ಕಂಡ ಧೂಮಕೇತುಗಳನ್ನು (Great Comet) ಗ್ರೇಟ್ ಕಾಮೆಟ್ ಎಂದು ಹೆಸರಿಸಿದ್ದಾರೆ.1996 ರ ಹಯಾಕುಟಿಕೆ, 1997ರ ಹೇಲ್ ಬೂಪ್, 2003ರ ನೀಟ್, 2007ರ ಮಕ್ನಾಟ್, 2011ರ ಲವ್ಜಾಯ್ ಹಾಗೂ 2020 ರ ನಿಯೋವೈಸ್ಗಳು. ಈಗ ಬರುತ್ತಿರುವ ಧೂಮಕೇತು ಬರಿಗಣ್ಣಿಗೆ ಕಂಡು ಇವುಗಳ ಸಾಲಿಗೆ ಸೇರಲಿದೆಯೇ ಕಾದು ನೋಡಬೇಕಿದೆ. ಈ ಧೂಮಕೇತು ಈ ತಿಂಗಳ ಬೆಳಗಿನ ಜಾವ ಹಾಗೂ ಬರುವ ತಿಂಗಳಿನ ಸಂಜೆ ಸೂರ್ಯನ ಸಮೀಪ ಬಂದು ಹೋಗುವಾಗ ಬೃಹತ್ ಬಾಲಬೀಸಿ ವಿಸ್ಮಯ ತೋರಬಹುದು.

-ಡಾ ಎ.ಪಿ ಭಟ್ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!