Wednesday, October 23, 2024
Wednesday, October 23, 2024

ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

Date:

ಬಾರಕೂರು, ಸೆ.13: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬ್ರಹ್ಮಾವರ ವಲಯ ಮತ್ತು ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಶನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ಆಶ್ರಯದಲ್ಲಿ ಬಾರಕೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2024-25 ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಾರಕೂರು ಎಜುಕೇಷನಲ್ ಸೊಸೈಟಿ (ರಿ) ಬಾರಕೂರು ಇದರ ಉಪಾಧ್ಯಕ್ಷರಾದ ಶೇಡಿಕೊಡ್ಲು ವಿಠಲ್ ಶೆಟ್ಟಿ ಅವರು, ವಿದ್ಯಾರ್ಥಿ ಜೀವನದಲ್ಲಿ ತಮ್ಮಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಉತ್ತಮ ವೇದಿಕೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾರಕೂರು ಎಜುಕೇಶನಲ್ ಸೊಸೈಟಿ (ರಿ) ಬಾರಕೂರಿನ ಅಧ್ಯಕ್ಷರಾದ ಬಿ. ಶಾಂತಾರಾಮ್ ಶೆಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ) ಬಾರಕೂರಿನ ಆಡಳಿತಕ್ಕೆ ಒಳಪಟ್ಟ ಎಲ್ಲಾ ವಿದ್ಯಾ ಸಂಸ್ಥೆಗಳ ಆಡಳಿತ ಸಂಯೋಜಕರಾದ ಆರ್ಚಿಬಾಲ್ಡ್ ಫುಟರ್ದೋ, ಐ.ಟಿ.ಐ. ಹೇರಾಡಿ ವಿದ್ಯಾ ಸಂಸ್ಥೆಯ ಸಂಚಾಲಕ ರಾಮಚಂದ್ರ ಕಾಮತ್, ನೇಷನಲ್ ಜೂನಿಯರ್ ಕಾಲೇಜಿನ ಸಂಚಾಲಕರದ ಗೋಪಾಲ ನಾಯ್ಕ್ . ಎಸ್.ವಿ.ವಿ.ಎನ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರಾಜರಾಮ್ ಶೆಟ್ಟಿ, ಬಿ. ಆರ್. ಸಿ ಬ್ರಹ್ಮಾವರ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯ ನೋಡಲ್ ಅಧಿಕಾರಿ ನಾಗರಾಜ್, ಬಿ.ಆರ್.ಸಿ ಮಂದಾರ್ತಿ ಹೋಬಳಿಯ ಪ್ರಕಾಶ. ಬಿ. ಬಿ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ನಿರ್ದೇಶಕ ಶ್ಯಾಮಸುಂದರ ಶೆಟ್ಟಿ, ಎಸ್.ವಿ.ವಿ.ಎನ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಜಯರಾಮ್ ಆಚಾರ್, ಬಾರಕೂರು ಕ್ಲಸ್ಟರ್ ನ ಸಿ.ಆರ್.ಪಿ. ಲಲಿತಾ, ಶಾಲಾ ಮುಖ್ಯೋಪಾಧ್ಯಾಯರಾದ ಲಿಖಿತಾ ಕೊಠಾರಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ಯನ್ನು ಶಾಲೆಯ ಸಂಚಾಲಕ ರಾಜಾರಾಮ್ ಶೆಟ್ಟಿ ವಹಿಸಿದ್ದರು. ಬಾರಕೂರು ಎಜುಕೇಷನಲ್ ಸೊಸೈಟಿ (ರಿ)ಬಾರಕೂರಿನ ಉಪಾಧ್ಯಕ್ಷರಾದ ಸೀತಾರಾಮ್ ಶೆಟ್ಟಿ, ನೇಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ ಶಾಲಾ ಸಂಚಾಲಕರಾದ ಶ್ರೀನಿವಾಸ್ ಶೆಟ್ಟಿಗಾರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲ್ಲೂಕು ನಿರ್ದೇಶಕರಾದ ಶ್ಯಾಮಸುಂದರ ಶೆಟ್ಟಿ, 2024-25ನೇ ಸಾಲಿನ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಮ್ ಆಚಾರ್, ಬಾರಕೂರು ಎಜುಕೇಷನಲ್ ಸೊಸೈಟಿ (ರಿ) ಬಾರಕೂರಿನ ಸದಸ್ಯರಾದ ರಾಜಗೋಪಾಲ್ ನಂಬಿಯಾರ್, ಬಾರಕೂರು ಕ್ಲಸ್ಟರ್ ನ ಸಿ. ಆರ್. ಪಿ ಲಲಿತಾ ಮತ್ತು ಶಾಲಾ ಮುಖ್ಯಸ್ಥರಾದ ಲಿಖಿತಾ ಕೊಠಾರಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ವೈಷ್ಣವಿ, ಧನುಶ್ರೀ, ಖುಷಿ ಪ್ರಾರ್ಥನೆ ಸಲ್ಲಿಸಿದರು. ಶಾಲಾ ಶಿಕ್ಷಕಿ ರೇಣುಕಾ ಸ್ವಾಗತಿಸಿ, ಶಿಕ್ಷಕಿಯರಾದ ಸುಜಾತಾ ಎಲ್. ರೈ, ಮತ್ತು ಬ್ರಿಜಿತ್ ಗೊನ್ಸ್ವಲೀಸ್ ವಂದಿಸಿದರು. ಶಾಲಾ ಶಿಕ್ಷಕ ನಾಗೇಂದ್ರ ಆಚಾರ್, ಶಿಕ್ಷಕಿ ಜ್ಯೋತಿ ಶೆಟ್ಟಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಬೋಧಕ ಬೋಧಕೇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೆ.ಎಂ.ಸಿ ಮಣಿಪಾಲ: ಅನ್ನನಾಳದ ರಂಧ್ರದ ತೊಂದರೆಗೆ ನವೀನ ಎಂಡೋಸ್ಕೋಪಿಕ್ ಚಿಕಿತ್ಸೆ; ಇದು ದಕ್ಷಿಣ ಭಾರತದಲ್ಲಿ ಮೊದಲನೆಯದು

ಮಣಿಪಾಲ, ಅ.22: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಅನ್ನನಾಳದ ರಂಧ್ರಕ್ಕೆ ಎಡೊಸ್ಕೋಪಿಕ್ ಚಿಕಿತ್ಸೆ...

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಉಡುಪಿ, ಅ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು...

ಜಿಲ್ಲೆಯನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಸಹಕಾರ ಅಗತ್ಯ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಅ.22: ಜಿಲ್ಲೆಯ ಎಲ್ಲಾ ಹೈನುಗಾರರು ತಮ್ಮ ಜಾನುವಾರುಗಳಿಗೆ ಪ್ರತಿಶತ ನೂರರಷ್ಟು...

ಅ. 26-27: ಬ್ರಹ್ಮಾವರದಲ್ಲಿ ಕೃಷಿ ಮೇಳ

ಉಡುಪಿ, ಅ.22: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ...
error: Content is protected !!