ನವದೆಹಲಿ, ಸೆ.9: ರಕ್ಷಣಾ ಸಚಿವಾಲಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನೊಂದಿಗೆ ಸುಖೋಯ್-30ಎಂಕೆಐ ವಿಮಾನಕ್ಕಾಗಿ 240 ಎ.ಎಲ್-31ೆಫ್.ಪಿ ಏರೋ ಎಂಜಿನ್‌ಗಳಿಗೆ ರೂ. 26 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ರಕ್ಷಣಾ ಸಚಿವಾಲಯದ ಪ್ರಕಾರ, ಈ ಏರೋ ಎಂಜಿನ್‌ಗಳನ್ನು ಎಚ್.ಎ.ಎಲ್. ನ ಕೊರಾಪುಟ್ ವಿಭಾಗವು ತಯಾರಿಸುತ್ತದೆ ಮತ್ತು ರಕ್ಷಣಾ ಸನ್ನದ್ಧತೆಗಾಗಿ ಸುಖೋಯ್-30ಎಂಕೆಐ ಫ್ಲೀಟ್‌ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಎಚ್.ಎ.ಎಲ್. ವಾರ್ಷಿಕವಾಗಿ 30 ಏರೋ ಇಂಜಿನ್‌ಗಳನ್ನು ಪೂರೈಸಲಿದ್ದು, ಎಲ್ಲಾ 240 ಎಂಜಿನ್‌ಗಳ ಪೂರೈಕೆಯು ಮುಂದಿನ ಎಂಟು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ಸರ್ಕಾರದ ಆತ್ಮನಿರ್ಭರ ಭಾರತ ಉಪಕ್ರಮಕ್ಕೆ ಉತ್ತೇಜನ ನೀಡುತ್ತದೆ.
ಎಚ್.ಎ.ಎಲ್. ಜೊತೆ ರೂ.26,000 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಸಚಿವಾಲಯ
ಎಚ್.ಎ.ಎಲ್. ಜೊತೆ ರೂ.26,000 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಸಚಿವಾಲಯ
Date: