ಉಡುಪಿ, ಸೆ.8: ಮುಜಮ್ಮಿಲ್ ಖಾನ್ ಪಠಾನ ಇವರನ್ನು ದಿನಾಂಕ 30/07/2024 ರಂದು ಸ್ಟಾಕ್ ಮಾರ್ಕೆಟ್ ಚಾಟ್ ವಾಟ್ಸ್ ಆಫ್ ಗುಂಪಿಗೆ ಯಾರೋ ಅಪರಿಚಿತರು ಸೇರ್ಪಡೆ ಮಾಡಿರುತ್ತಾರೆ. ಸದ್ರಿ ಗುಂಪಿನಲ್ಲಿ ಸ್ಟಾಕ್ ಮಾರ್ಕೇಟ್ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ನಂತರ ತಾವು ಹೇಳಿದ ಷೇರಿನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದಾಗಿ ಪಿರ್ಯಾದಿದಾರರನ್ನು ನಂಬಿಸಿ, ದಿನಾಂಕ 23/08/2024 ದಿನಾಂಕ 06/09/2024 ರ ವರೆಗೆ ಆಪಾದಿತರು ವಿವಿಧ ಖಾತೆಗಳಿಗೆ ಒಟ್ಟು 4,86,885/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡು, ತದನಂತರ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನು ನೀಡದೇ ಲಾಭಾಂಶವನ್ನು ನೀಡದೇ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಸ್ಟಾಕ್ ಮಾರ್ಕೆಟ್ ಹೂಡಿಕೆ ಹೆಸರಿನಲ್ಲಿ ವಂಚನೆ
ಉಡುಪಿ: ಸ್ಟಾಕ್ ಮಾರ್ಕೆಟ್ ಹೂಡಿಕೆ ಹೆಸರಿನಲ್ಲಿ ವಂಚನೆ
Date: