ನವದೆಹಲಿ, ಸೆ.7: ಶಿಕ್ಷಕರು ರಾಷ್ಟ್ರಕ್ಕೆ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಇಂದಿನ ಯುವಕರನ್ನು ವಿಕಸಿತ ಭಾರತಕ್ಕಾಗಿ ಸಿದ್ಧಪಡಿಸುವ ಜವಾಬ್ದಾರಿ ಅವರ ಕೈಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯಲ್ಲಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರೊಂದಿಗೆ ತಮ್ಮ ನಿವಾಸದಲ್ಲಿ ಪ್ರಧಾನಿ ಸಂವಾದ ನಡೆಸಿದರು. ವಿಕಸಿತ ಭಾರತಕ್ಕಾಗಿ ಸಮರ್ಥ ನಾಗರಿಕರು ಮತ್ತು ಯುವಕರನ್ನು ತಯಾರಿಸಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಒತ್ತಿ ಹೇಳಿದ ಪ್ರಧಾನಿ, ಭಾರತದ ವೈವಿಧ್ಯತೆಯನ್ನು ಅನ್ವೇಷಿಸಲು ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಗಳಿಗೆ ಕರೆದೊಯ್ಯಬಹುದು, ಇದು ಅವರ ಕಲಿಕೆಗೆ ಸಹಾಯ ಮಾಡುತ್ತದೆ ಮತ್ತು ಅವರ ದೇಶದ ಬಗ್ಗೆ ಸಮಗ್ರ ರೀತಿಯಲ್ಲಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಮತ್ತು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಹೇಳಿದರು. ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಸಾಧಿಸಬೇಕು ಮತ್ತು ಅವರ ಉತ್ತಮ ಅಭ್ಯಾಸಗಳನ್ನು (ಬೆಸ್ಟ್ ಪ್ರಾಕ್ಟೀಸಸ್) ಹಂಚಿಕೊಳ್ಳಬೇಕು ಇದರಿಂದ ಪ್ರತಿಯೊಬ್ಬರೂ ಪರಸ್ಪರ ಕಲಿಯಬಹುದು, ಹೊಂದಿಕೊಳ್ಳಬಹುದು ಮತ್ತು ಪ್ರಯೋಜನ ಪಡೆಯಬಹುದು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.
ದೇಶಕ್ಕೆ ಶಿಕ್ಷಕರ ಸೇವೆ ಮಹತ್ವದ್ದು: ಪ್ರಧಾನಿ ನರೇಂದ್ರ ಮೋದಿ
ದೇಶಕ್ಕೆ ಶಿಕ್ಷಕರ ಸೇವೆ ಮಹತ್ವದ್ದು: ಪ್ರಧಾನಿ ನರೇಂದ್ರ ಮೋದಿ
Date: