ಉಡುಪಿ, ಸೆ.3: ಚೈತನ್ಯ ಮಿತ್ರ ಮಂಡಳಿ, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಹಾಳೆಕಟ್ಟೆ ಕಲ್ಯಾ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಪ್ರಯುಕ್ತ 22ನೇ ವರ್ಷದ ಸಾಂಸ್ಕೃತಿಕ ಕ್ರೀಡೋತ್ಸವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಯಾ ಇದರ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಮೊದಲಿಗೆ ಹುತಾತ್ಮ ಯೋಧ ಪ್ರಂಜಲ್ ಸ್ಮಾರಕಕ್ಕೆ ಹಾಗೂ ಮಹಾದಾನಿ ಅಜ್ಜಮ್ಮ ದಿ. ಲಕ್ಶ್ಮಿ ಶೆಟ್ಟಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವಾರ್ಪಣೆ ಸಲ್ಲಿಸಲಾಯಿತು. ಸ್ಥಳೀಯ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಸುಭಾಷ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಚೈತನ್ಯ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಎಸ್ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲದ ಅಧ್ಯಕ್ಷರು ಕ್ರೀಡಾ ಧ್ವಜಾರೋಹಣಗೈದರು. ಮುಖ್ಯ ಅತಿಥಿಗಳಾಗಿ ಶಾಲಾ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷೆ ಆಶಾ ಪಿ ಎಸ್ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮಹಿಳಾ ಮಂಡಲದ ಸ್ಥಾಪಕರ ಅಧ್ಯಕ್ಷೆ ರೂಪಾ ಯತೀಶ್, ಮಾಜಿ ಅಧ್ಯಕ್ಷೆ ಶಕುಂತಲಾ ಅಂಚನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಧೀರಜ್ ಶೆಟ್ಟಿ ಸ್ವಾಗತಿಸಿ, ಶ್ರೇಯ ಪ್ರಾರ್ಥಿಸಿದರು ಸಿಂಚನ ವಂದಿಸಿದರು. ಸಂಧ್ಯಾ ಚೇತನ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಂಕರ್ ಆಚಾರ್ಯ ಅಧ್ಯಕ್ಷರು ಎಸ್ ಡಿ ಎಂ ಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ. ವಹಿಸಿದರು.. ಉದಯಕುಮಾರ್ ಶೆಟ್ಟಿ ಮುನಿಯಾಲ್ ಅಧ್ಯಕ್ಷರು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇವರು ಗ್ರಾಮೀಣ ಪ್ರತಿಭೆಗಳದ ಅಕ್ಷತಾ ಪೂಜಾರಿ ಬೋಳ, ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮತ್ತು ಹತ್ತನೇ ತರಗತಿಯಲ್ಲಿ ಕಲ್ಯ ಪ್ರೌಢಶಾಲೆಯಲ್ಲಿ ಶೇಕಡ 95 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಹಿತೇಶ್, ದ್ವಿತೀಯ ಪಿಯುಸಿಯಲ್ಲಿ ಶೇಕಡ 90 ಅಂಕ ಪಡೆದ ಸಂಸ್ಥೆಯ ಸದಸ್ಯೆ ಆವಿಕ್ಷ ಉಮೇಶ್ ಹಾಗೂ ಸ್ಥಳೀಯ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಸಹಾಯಕಿಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪುಷ್ಪಾ ಪೈ ಹಾಗೂ ಶೋಭಾ ಪೂಜಾರ್ತಿ ಇವರನ್ನು ಗೌರವಿಸಿ, ಕಳೆದ 22 ವರ್ಷಗಳಿಂದ ನಿರಂತರ ಈ ಭಾಗದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿರುವ ಚೈತನ್ಯ ಮಿತ್ರ ಮಂಡಳಿಯನ್ನು ಅಭಿನಂದಿಸಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅರುಣ್ ಕುಮಾರ್ ನಿಟ್ಟೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಜಯಂತಿ ಶೆಟ್ಟಿ ಜೆಸಿಐ ತರಬೇತುದಾರರು ಪ್ರಧಾನ ಉಪಾನ್ಯಾಸಕಿಯಾಗಿ ಮಾತನಾಡಿ ಶ್ರೀ ಕೃಷ್ಣನ ಲೀಲೆಯನ್ನು ಸವಿಸ್ತಾರವಾಗಿ ವಿವರಿಸಿ ಚೈತನ್ಯ ಮಿತ್ರ ಮಂಡಳಿಯ ಕಾರ್ಯಚಟುವಟಿಕೆಯನ್ನು ಪ್ರಶಂಶಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಗದೀಶ್ ಆಚಾರ್ಯ ಸದಸ್ಯರು ಗ್ರಾಮ ಪಂಚಾಯತ್ ಕಲ್ಯಾ, ಪ್ರೇಮ ಸದಸ್ಯರು ಗ್ರಾಮ ಪಂಚಾಯತ್ ಕಲ್ಯಾ, ಮಲ್ಲಿಕಾರ್ಜುನ್ ಎಸ್ ಎಸ್., ಪ್ರತಿಮಾ ಸಿ ಅಮೀನ್, ರೂಪಾ ಯತೀಶ್, ಶಕುಂತಲಾ ಬಂಗೇರ ಉಪಸ್ಥಿತರಿದ್ದರು. ಕಾರ್ಯದರ್ಶಿ ಧೀರಜ್ ಶೆಟ್ಟಿ ಸ್ವಾಗತಿಸಿ, ಸಂಚಾಲಕ ಯತೀಶ್ ಎನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.