ಮಣಿಪಾಲ, ಸೆ.2: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗವು ಸದ್ಭಾವ ಕೇಂದ್ರ, ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲ್ಯಾನಿಂಗ್ ವಿಭಾಗಗಳ ಸಹಭಾಗಿತ್ವದಲ್ಲಿ ವಿಶ್ವ ಛಾಯಾಗ್ರಹಣ ದಿನ-2024 ಪ್ರಯುಕ್ತ ‘ಮಾಹೆ ಆವರಣದ ಬದುಕು’ ಎಂಬ ವಿಷಯ ಕೇಂದ್ರಿತವಾಗಿ ವಿವಿಧ ಕಾರ್ಯಕ್ರಮಗಳು ಮತ್ತು ಛಾಯಾಚಿತ್ರ ಪ್ರದರ್ಶನಗಳು ಜರಗಿದವು. ಈ ಉಪಕ್ರಮಕ್ಕೆನಿಕಾನ್- ಇಂಡಿಯ ಸಹಯೋಗ ನೀಡಿತ್ತು. ‘ನಿಕಾನ್ ಇಂಡಿಯ’ದ ಪ್ರಾಯೋಜಕತ್ವದಲ್ಲಿ ನಿಕಾನ್ ಕೆಮರಾದ ಬಳಕೆದಾರರಿಗಾಗಿ ಉಚಿತ ಸೇವಾ ಸೌಲಭ್ಯದ ಶಿಬಿರವನ್ನು ಆಯೋಜಿಸುವುದರೊಂದಿಗೆ ಸರಣಿ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಈ ಶಿಬಿರವು ನಿಕಾನ್ ಕೆಮರಾ ಬಳಸುವ ವಿದ್ಯಾರ್ಥಿಗಳಿಗೆ ಮತ್ತು ಸಿಬಂದಿಗಳಿಗೆ ಪ್ರಯೋಜನಕಾರಿಯಾಯಿತು.
ನೂರಕ್ಕಿಂತಲೂ ಅಧಿಕ ಮಂದಿ ಈ ತರಬೇತಿ ಶಿಬಿರದ ಲಾಭವನ್ನು ಪಡೆದುಕೊಂಡರು. ‘ನಿಕಾನ್ ಇಂಡಿಯ’ದ ವತಿಯಿಂದ ಛಾಯಾಚಿತ್ರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಆವಶ್ಯಕ ಛಾಯಾಚಿತ್ರಗ್ರಹಣ ತಂತ್ರಗಾರಿಕೆ, ಉಪಕರಣಗಳ ನಿಭಾವಣೆ, ಸೃಜನಶೀಲತೆಯೊಂದಿಗೆ ಬಳಕೆ, ಛಾಯಾಗ್ರಹಣದ ಕೌಶಲ ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಮಾಹೆ ಕ್ಯಾಂಪಸ್‌ನ ಸುತ್ತಮುತ್ತಲಿನ ಬದುಕಿಗೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನ ಗಮನ ಸೆಳಯಿತು.
ಸಮಾರೋಪ ಸಮಾರಂಭದಲ್ಲಿ ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ನಿರ್ದೇಶಕ ಡಾ. ಕಲ್ಯಾಣ್ ಕುಮಾರ್ ಮುಖರ್ಜಿ, ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಉಪನಿರ್ದೇಶಕ ಸಚಿನ್ ಕಾರಂತ್, ಸುರೇಶ್ ಕೋಟ್ಯಾನ್, ಮಿಥುನ್‌ರಾಜ್, ಟಿ. ಎನ್. ತ್ರಿವಿಕ್ರಮ್, ನಿಕಾನ್ ಇಂಡಿಯದ ಅರುಣ್ ಉಪಸ್ಥಿತರಿದ್ದರು.