ಉಡುಪಿ, ಆ.28: ಕಾರ್ಕಳದ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ಕ್ಯಾಂಟೀನ್ ಅನ್ನು ನಡೆಸಲು ಅನುಭವವುಳ್ಳ ಹೋಟೆಲ್ ಉದ್ಯಮ/ ಹೋಟೆಲ್ ಮಾಲೀಕರಿಂದ ಷರತ್ತಿಗೊಳಪಟ್ಟು ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ನೋಟಿಫಿಕೇಷನ್ ನಮೂನೆಗಳನ್ನು ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದ ಕಚೇರಿಯಿಂದ ಸೆಪ್ಟಂಬರ್ 30 ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಪಡೆಯಬಹುದಾಗಿದ್ದು, ಟೆಂಡರ್ ಸ್ವೀಕರಿಸಲು ಅಕ್ಟೋಬರ್ 1 ಕೊನೆಯ ದಿನ. ಟೆಂಡರ್ ಅನ್ನು ಅಕ್ಟೋಬರ್ 3 ರಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ಕಚೇರಿ, ಕಾರ್ಕಳ ಇವರನ್ನು ಕಚೇರಿಯ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕ್ಯಾಂಟೀನ್- ಟೆಂಡರ್ ಆಹ್ವಾನ
ಕ್ಯಾಂಟೀನ್- ಟೆಂಡರ್ ಆಹ್ವಾನ
Date: