Wednesday, November 13, 2024
Wednesday, November 13, 2024

ಸಹಾಯಧನ ಸೌಲಭ್ಯ: ಅರ್ಜಿ ಆಹ್ವಾನ

ಸಹಾಯಧನ ಸೌಲಭ್ಯ: ಅರ್ಜಿ ಆಹ್ವಾನ

Date:

ಉಡುಪಿ, ಆ.23: ಕೇಂದ್ರ ಸರ್ಕಾರದ ಕೃಷಿ ಮೂಲಭೂತ ಸೌಕರ್ಯಾಭಿವೃದ್ಧಿ ನಿಧಿ ಯೋಜನೆಯಡಿ ಗೋದಾಮುಗಳು, ಆಧುನಿಕ ಸೈಲೊಗಳು, ಈ-ಮಾರ್ಕೆಟಿಂಗ್ ವೇದಿಕೆ, ಸರಬರಾಜು ಸರಪಳಿ ಸೇವೆಗಳಿಗೆ, ಪ್ಯಾಕ್ ಹೌಸ್ ಮತ್ತು ಬಾಡಿಗೆ ಸೇವಾ ಕೇಂದ್ರ, ಜೋಡಣೆ, ವಿಂಗಡಣೆ, ಶ್ರೇಣೀಕರಣ ಘಟಕ, ಶಿಥಲೀಕರಣ ಘಟಕ, Smart and Precision Agriculture ಮೂಲಭೂತ ಸೌಕರ್ಯ, Refrigerated transportation, ಗುಚ್ಚ ಬೆಳೆಗಳ ಸರಬರಾಜು ಅರಪಳಿ ಮೂಲಭೂತ ಸೌಕರ್ಯ, ಸಂಗ್ರಹಣಾ ಕೇಂದ್ರಗಳು, ಸಾವಯವ ಕೃಷಿ ಪರಿಕರಗಳ ಉತ್ಪಾದನಾ ಘಟಕಗಳು ಮತ್ತು ಜೈವಿಕ ಪ್ರಚೋದಕ ಘಟಕಗಳು, ಹಣ್ಣು ಮಾಗಿಸುವ ಘಟಕಗಳು, ಸಾಮೂಹಿಕ ಅಣಬೆ ಉತ್ಪಾದನಾ ಚಟುವಟಿಕೆಗಳು, ಪ್ರಾಥಮಿಕ ಸಂಸ್ಕರಣಾ ಘಟಕಗಳು ಮತ್ತು ರಾಜ್ಯ ಸರ್ಕಾರ/ಕೇಂದ್ರ ಸರ್ಕಾರ/ಸ್ಥಳೀಯ ಆಡಳಿತದ ಸಮುದಾಯ ಕೃಷಿ ಆಸ್ತಿಗಳ-ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಯೋಜನೆಗಳು ಇತ್ಯಾದಿ ಘಟಕಗಳಿಗೆ ಹಣಕಾಸು ಸಂಸ್ಥೆಯಿಂದ ಪಡೆಯುವ ಸಾಲಕ್ಕೆ ಶೇ. 3 ರ ಸಹಾಯಧನ ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರದ ಸಮಗ್ರ ಕೃಷಿ ಮಾರುಕಟ್ಟೆ ಯೋಜನೆಯ ಉಪಯೋಜನೆಯಾದ ಕೃಷಿ ಮಾರುಕಟ್ಟೆ ಮೂಲಭೂತ ಸೌಕರ್ಯಾಭಿವೃದ್ಧಿ ಯೋಜನೆಯಡಿ ಕೃಷಿ/ತೋಟಗಾರಿಕಾ ಸಂಗ್ರಹಣಾ ಘಟಕಗಳು ಹಾಗೂ ರೈತ-ಗ್ರಾಹಕ ಮಾರುಕಟ್ಟೆ, ಗ್ರಾಮೀಣ ಮಾರುಕಟ್ಟೆ ಮೂಲಭೂತ ಸೌಕರ್ಯದ ಉನ್ನತೀಕರಣಕ್ಕೆ ಸಹಾಯಧನ ಲಭ್ಯವಿದ್ದು, ರೈತ ಉತ್ಪಾದಕರ ಸಂಸ್ಥೆಗಳು, ಪಂಚಾಯತ್‌ಗಳು, ಮಹಿಳಾ, ಪ.ಜಾ. ಮತ್ತು ಪ.ಪಂ. ದ ಉದ್ದಿಮೆದಾರರು ಮತ್ತು ಅವರ ಸಹಕಾರ ಸಂಘ ಮತ್ತು ಸ್ವ ಸಹಾಯ ಸಂಘಗಳಿಗೆ ಒಟ್ಟು ವೆಚ್ಚದ ಶೇ. 33.33 ಹಾಗೂ ಇತರೆ ಫಲಾನುಭವಿಗಳಿಗೆ ಶೇ. 25 ಸಹಾಯಧನ ಪಡೆಯಬಹುದಾಗಿದೆ.

ಅರ್ಹ ಪ್ರಸ್ತಾವನೆಗಳನ್ನು ಸಾಲ ಸೌಲಭ್ಯ ಪಡೆಯುವ ಬ್ಯಾಂಕ್‌ನ ಮೂಲಕ ಸಹಾಯಧನ ಮಂಜೂರಾತಿಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಮಂಗಳೂರು ಮೊಬೈಲ್ ಸಂ.: 8547702196, ಇ-ಮೇಲ್: [email protected] ಅನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗ್ರಾಮ ಪಂಚಾಯತ್ ಕಾರ್ಯಪಡೆ ಸದಸ್ಯರಿಗೆ ಗ್ರಾಮ ಆರೋಗ್ಯ ತರಬೇತಿ ಕಾರ್ಯಗಾರ

ಉಡುಪಿ, ನ.13: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಗ್ರಾಮ ಪಂಚಾಯತ್ ಉಪಚುನಾವಣೆ: ಸಂತೆ, ಜಾತ್ರೆ ನಿಷೇಧ

ಉಡುಪಿ, ನ.13: ಜಿಲ್ಲೆಯ ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಹಾಗೂ 13-ಕೊಡಿಬೆಟ್ಟು, ಕುಂದಾಪುರ...

ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಲು ಅರ್ಜಿ ಆಹ್ವಾನ

ಉಡುಪಿ, ನ.13: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...

ಕಾರ್ಮಿಕರಿಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ನ.12: ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು...
error: Content is protected !!