Thursday, October 24, 2024
Thursday, October 24, 2024

ಆ್ಯಂಟಿ ರ‍್ಯಾಗಿಂಗ್ ಕಾರ್ಯಾಗಾರ

ಆ್ಯಂಟಿ ರ‍್ಯಾಗಿಂಗ್ ಕಾರ್ಯಾಗಾರ

Date:

ಕಟಪಾಡಿ, ಆ.21: ಪಾಜಕ ಶ್ರೀ ವಿಶ್ವೇತೀರ್ಥ ಮಹಾವಿದ್ಯಾಲಯ ಪದವಿ ಕಾಲೇಜಿನಲ್ಲಿ ಆ್ಯಂಟಿ ರ‍್ಯಾಗಿಂಗ್ ಕುರಿತ ಮಾಹಿತಿ ಕಾರ್ಯಾಗಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಶಿರ್ವ ಪೋಲೀಸ್‌ ಠಾಣೆಯ ಕ್ರೈಂ ಬ್ರಾಂಚ್‌ ಇನ್‌ವೆಸ್ಟಿಗೇಟಿಂಗ್‌ ಆಫೀಸರ್‌ ಅನಿಲ್‌ ಕುಮಾರ್‌ ಹಾಗೂ ಸಬ್‌ ಇನ್ಸ್‌ಸ್ಪೆಕ್ಟರ್‌ ಶ್ರೀದರ್‌ ಭಾಗವಹಿಸಿ ಆ್ಯಂಟಿ ರ‍್ಯಾಗಿಂಗ್ ಕುರಿತು ಮಾಹಿತಿ ನೀಡಿದರು. ಇಂದು ರ‍್ಯಾಗಿಂಗ್ ಕುರಿತು ಸುಪ್ರೀಂ ಕೋರ್ಟ್‌ ಅದೇಶದಂತೆ ಸರ್ಕಾರ ಅತ್ಯಂತ ಗಂಭೀರವಾದ ಪರಿಣಾಮಕಾರಿಯಾದ ಕಾನೂನು ಜಾರಿಗೆ ತಂದಿರುವುದರಿಂದ ಮೊದಲಿನಂತೆ ರ‍್ಯಾಗಿಂಗ್ ಹಾವಳಿ ಇಲ್ಲ ಆದರೂ ಅಲ್ಲಲ್ಲಿ ಕೆಲವೊಮ್ಮೆ ಸದ್ದಿಯಾಗುತ್ತಿರುತ್ತದೆ. ಇದನ್ನು ಸಂಪೂರ್ಣವಾಗಿ ತೊಡೆದು ಹಾಕುವಲ್ಲಿ ವಿದ್ಯಾರ್ಥಿಗಳ ಸಹಾಕಾರವೂ ಅಸ್ಟೇ ಮುಖ್ಯ. ರ‍್ಯಾಗಿಂಗ್ ಎಂದರೆ ವ್ಯಕ್ತಿಗೆ ಕೇವಲ ದೈಹಿಕ ಹಿಂಸೆ ನೀಡುವುದು ಮಾತ್ರ ರ‍್ಯಾಗಿಂಗ್ ಅಲ್ಲ. ಬದಲಾಗಿ ಯಾವುದೇ, ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುವುದು, ವ್ಯಕ್ತಿಗೆ ಪ್ರಚೋದನೆಯಾಗುವಂತೆ ವರ್ತಿಸುವುದು, ದೈಹಿಕವಾಗಿ ಹಿಂಸೆ ಮಾಡುವುದು, ಬೆದರಿಕೆ ಹಾಕುವುದು. ತುಚ್ಚವಾಗಿ ಮಾತನಾಡುವುದು, ಗುರಾಯಿಸಿ ನೋಡುವುದು ಇವೆಲ್ಲವೂ ರ‍್ಯಾಗಿಂಗ್‌ ವ್ಯಾಪ್ತಿಗೆ ಬರುತ್ತದೆ. ಇಂತಹದನ್ನು ಯಾರೇ ಮಾಡಿದರೂ ಅದು ಕಾನೂನಿನ ರೀತಿಯ ಅಪರಾದ. ಅಂತಹ ವ್ಯಕ್ತಿಗೆ ಕಠಿಣವಾದ ಶಿಕ್ಷೆಯನ್ನು ಕಾನೂನಿನ ಮೂಲಕ ಕೊಡಿಸಬಹುದು. ಇಂತಹ ಘಟನೆಗಳು ನಡೆದಾಗ ಕೂಡಲೆ ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೆ ನೇರವಾಗಿ ಹತ್ತಿರದ ಪೋಲೀಸ್‌ ಠಾಣೆಗೆ ದೂರು ನೀಡಿದರೆ ಕೃತ್ಯ ಎಸಗಿದ ವ್ಯಕ್ತಿ ಮೇಲೆ ನಿರ್ದಾಕ್ಷಿಣ್ಯ ಕ್ರಮವನ್ನು ಇಲಾಖೆ ಕೈಗೊಳ್ಳುತ್ತದೆ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಯಾರೂ ಇಂತಹ ರ‍್ಯಾಗಿಂಗ್ ಚಟಕ್ಕೆ ಬಲಿಯಾಗಬಾರದು. ಹಾಗೂ ಯಾರೂ ಎಂತಹ ಕೃತ್ಯ ಮಾಡಬಾರದು ಮಾಡಿದರೆ ಸುಮಾರು 10 ವರ್ಷಗಳ ಕಾಲ ಜೈಲಿನಲ್ಲಿ ಬಂದಿಯಾಗಬೇಕಾಗುತ್ತದೆ. ಇಡೀ ವಿದ್ಯಾರ್ಥಿ ಜೀವನ ಸಂಪೂರ್ಣ ಹಾಳಾಗುತ್ತದೆ. ಆದ್ದರಿಂದ ಯಾರೂ ಇಂಹತ ಕೃತ್ಯಕ್ಕೆ ಸಹಾಯ ಮಾಡುವುದಾಗಲಿ, ಅಥವಾ ಬೇರೊಬ್ಬ ವ್ಯಕ್ತಿಗೆ ತೊಂದರೆ ಕೊಡುವುದಾಗಲಿ ಮಾಡಬಾರದು. ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಇಂತಹ ಸಮಾಜ ಘಾತುಕ ಕೃತ್ಯ ಮಾಡಿ ಹಾಳು ಮಾಡಿಕ್ಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಾಂಶುಪಾಲ ವಿಜಯ್‌ ಪಿ. ರಾವ್‌, ಪಿ.ಎಸ್.ಐ ಶ್ರೀದರ್‌, ಪದವಿ ಕಾಲೇಜು ಸಂಯೋಜಕಿ ರಕ್ಷಿತಾ ಉಪಸ್ಥಿತರಿದ್ದರು. ದ್ವಿತೀಯ ಬಿ.ಕಾಂ ನ ದ್ವಿತೀಯ ಬಿ. ಸಿ. ಎ ವಿದ್ಯಾರ್ಥಿನಿ ರಕ್ಷಿತಾ ಸ್ವಾಗತಿಸಿ, ದ್ವಿತೀಯ ಬಿ.ಸಿ.ಎ ಯ ವಿವೇಕ್‌ ವಂದಿಸಿದರು. ನಿಕಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.26: ಸ್ವಯಂಪ್ರೇರಿತ ರಕ್ತದಾನ ಶಿಬಿರ

ಉಡುಪಿ, ಅ.24: ಕಾರ್ಕಳ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ರೆಡ್‌ಕ್ರಾಸ್ ಮತ್ತು ರಾಷ್ಟ್ರೀಯ...

ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾಗಿ ಡಾ. ರೋಶನ್ ಕುಮಾರ್ ಶೆಟ್ಟಿ ಅಧಿಕಾರ ಸ್ವೀಕಾರ

ಉಡುಪಿ, ಅ.24: ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾಗಿ ಯುವ ಸಬಲೀಕರಣ ಮತ್ತು...

ವಿಧಾನ ಪರಿಷತ್ ಉಪಚುನಾವಣೆ: ಬಿಜೆಪಿಯ ಕಿಶೋರ್ ಕುಮಾರ್ ಗೆಲುವು

ಉಡುಪಿ, ಅ.24: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನ...

ಗಣೇಶ ಪ್ರಸಾದ್ ಕೊಡಿಬೆಟ್ಟುಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಕಟಪಾಡಿ, ಅ.24: ಉಡುಪಿ ಜ್ಞಾನಸುಧಾ ಪ.ಪೂ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಕೊಡಿಬೆಟ್ಟು...
error: Content is protected !!