ಉಡುಪಿ, ಆ.19: ಚಿತ್ತರಂಜನ್ ಸರ್ಕಲ್ ಬಳಿಯ ಉಪೇಂದ್ರ ಕಟ್ಟಡದಲ್ಲಿ ಕಾರ್ಯಾಚರಣೆ ಮಾಡಿಕೊಂಡಿದ್ದ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಈಗ ಚಿತ್ತರಂಜನ್ ಸರ್ಕಲ್ ಬಳಿಯ ಬೆಸ್ಟ್ ಕೋ ಕಾಂಪ್ಲೆಕ್ಸಗೆ ಸ್ಥಳಾಂತರಗೊಂಡಿದೆ. ರೆವೆ. ದೇವಕುಮಾರ್, ಸಭಾಪಾಲಕರು, ಸಿ. ಎಸ್. ಐ. ಕ್ರಿಸ್ತ ಜ್ಯೋತಿ ದೇವಾಲಯ ಪ್ರಾರ್ಥನೆ ಮಾಡಿ ಆಶೀರ್ವದಿಸಿದರು. ಶಾಸಕ ಯಶಪಾಲ್ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅತೀ ಕಡಿಮೆ ಬೆಲೆಯಲ್ಲಿ ಔಷಧ ಸಾಮಾನ್ಯ ಜನರಿಗೂ ದೊರಕುವಂತೆ ದೇಶಾದ್ಯಂತ 12616 ಮಳಿಗೆಗಳ ಮೂಲಕ 2000ಕ್ಕೂ ಹೆಚ್ಚು ಔಷಧಗಳನ್ನು ಜನರಿಗೆ ದೊರಕುವಂತೆ ಮಾಡಿರುತ್ತಾರೆ. ಜನರು ಇದರ ಸದುಪಯೋಗವನ್ನು ಪಡೆಯಬೇಕೆಂದು ಕರೆ ನೀಡಿದರು. ಮಾಲಕರಾದ ಡೊನಾಲ್ಡ್ ಸಾಲಿನ್ಸ್ ಸ್ವಾಗತಿಸಿ ವಂದಿಸಿದರು. 2018ರಲ್ಲಿ ಪ್ರಾರಂಭಗೊಂಡ ಈ ಮಳಿಗೆಯಲ್ಲಿ ಔಷಧವು ಜನರಿಗೆ ಕೈಗೆಟಕುವ ದರದಲ್ಲಿ ದೊರೆಯುತ್ತಿದೆ. ಮಳಿಗೆಯು ಬೆಳಿಗ್ಗೆ 9ರಿಂದ ರಾತ್ರಿ 9 ರವರೆಗೆ ಕಾರ್ಯಚರಿಸುತ್ತಿದ್ದು ಮುಖ್ಯವಾಗಿ ಹಿರಿಯ ನಾಗರಿಕರಿಗೆ ಮತ್ತು ವೃದ್ಧರಿಗೆ ಮನೆ ಬಾಗಿಲಿಗೆ ಔಷಧಿ ಪೂರೈಸುವ ವ್ಯವಸ್ಥೆಗಳಿವೆ.