Wednesday, December 4, 2024
Wednesday, December 4, 2024

ಸುಧಾರಿತ ಟೈಲರಿಂಗ್ ಮತ್ತು ಫ್ಯಾಷನ್ ಬ್ಲೌಸ್ ತರಬೇತಿ

ಸುಧಾರಿತ ಟೈಲರಿಂಗ್ ಮತ್ತು ಫ್ಯಾಷನ್ ಬ್ಲೌಸ್ ತರಬೇತಿ

Date:

ಉಡುಪಿ, ನ.11: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ವಿಜಯ ಗ್ರಾಮೀಣ ಪ್ರತಿಷ್ಠಾನ ಮಂಗಳೂರು, ಗ್ರಾಮ ಪಂಚಾಯತ್ ಮಡಾಮಕ್ಕಿ, ಸಂಜೀವಿನಿ ಒಕ್ಕೂಟ, ಇವರ ಸಹಯೋಗದಲ್ಲಿ 7 ದಿನಗಳ ಕಾಲ ನಡೆಸದ ಸುಧಾರಿತ ಟೈಲರಿಂಗ್ ಮತ್ತು ಫ್ಯಾಷನ್ ಬ್ಲೌಸ್ ತರಬೇತಿಯ ಸಮಾರೋಪ ಸಮಾರಂಭ ಗ್ರಾಮ ಪಂಚಾಯತ್ ಸಭಾಂಗಣ ಮಡಾಮಕ್ಕಿಯಲ್ಲಿ ನಡೆಯಿತು.

ತರಬೇತಿಯ ಸಮಾರೋಪ ಸಮಾರಂಭದಲ್ಲಿ ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ರೈ ಅವರು ಮಾತನಾಡಿ, ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯೋಗ ಕೈಗೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಶೆಟ್ಟಿ ಮಾತನಾಡುತ್ತಾ, ಶಿಬಿರಾರ್ಥಿಗಳು ಗ್ರಾಮದಲ್ಲಿ ಸ್ವಂತ ಉದ್ದಿಮೆ ಸ್ಥಾಪಿಸಲು ಬೇಕಾಗುವ ಸಹಕಾರವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬೇಬಿ ಹೆಗ್ಡೆ, ಬ್ಯಾಂಕ್ ಆಫ್ ಬರೋಡಾ ಮಡಾಮಕ್ಕಿ ಶಾಖೆಯ ಸಹ ವ್ಯವಸ್ಥಾಪಕರಾದ ಸ್ವಾಮಿ, ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷೆ ಉಷಾ, ಸಂಜೀವಿನಿ ಎನ್ ಆರ್ ಎಲ್ ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಉಮಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ವೀಣಾ ಹೆಗ್ಡೆ, ಮಡಾಮಕ್ಕಿ ಗ್ರಾಮ ಪಂಚಾಯತ್ ಪಿಡಿಓ ರಿತೇಶ್ ಪುತ್ರನ್, ತರಬೇತುದಾರರಾದ ನಿಶಾ ಅಣ್ಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಪ್ನ ಪ್ರಾರ್ಥಿಸಿ, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಜೀವಿನಿ ಸಂಘದ ಎಲ್.ಸಿ. ಆರ್.ಪಿ ವನಿತಾ ಸ್ವಾಗತಿಸಿ, ಪಶಿಸಖಿ ಲತಾ ಹೆಗ್ಡೆ ವಂದಿಸಿದರು. ಸಂಜೀವಿನಿ ಸಂಘದ ಎಂಬಿಕೆ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಗೋಶಾಲೆಗೆ ಬೈಹುಲ್ಲು ಕೊಡುಗೆ

ಬೆಳ್ಮಣ್, ಡಿ.3: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಬ್ರಹ್ಮಾವರ: ಗಾಳಿ ಮಳೆಗೆ ಮನೆಗಳಿಗೆ ಹಾನಿ

ಉಡುಪಿ, ಡಿ.3: ಚಂಡಮಾರುತದ ಪ್ರಭಾವದಿಂದ ಸೋಮವಾರ ಸುರಿದ ಭಾರೀ ಮಳೆಗೆ ಬ್ರಹ್ಮಾವರ...

ಸ್ನೇಹಿತರ ಬಳಗದಿಂದ ಭಾಸ್ಕರ್ ಶೆಟ್ಟಿ ಅವರಿಗೆ ಸನ್ಮಾನ

ಗಂಗೊಳ್ಳಿ, ಡಿ.3: ಉತ್ತಮ ಸ್ನೇಹಿತರನ್ನು ಹೊಂದುವುದು ಜೀವನದಲ್ಲಿ ನಾವು ಮಾಡುವ ಅತಿ...
error: Content is protected !!