ಬೆಂಗಳೂರು, ಆ.14: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ ಬಜ್ಪೆಯ ರೋಶನ್ ಮೆಲ್ಕಿ ಸಿಕ್ವೇರಾ ಅವರ ಕೊಂಕಣಿ ಸಣ್ಣ ಕತೆ ʼಪೇಯಿಂಗ್ ಗೆಸ್ಟ್ʼ ಹಾಗೂ ಪ್ರಾನ್ಸಿಸ್ ಅಲಂಗಾರ್ ಅವರ ಕೊಂಕಣಿ ಲೇಖನ ʼಜಿರೆಂ ಜಿರಿಂʼ ಆಯ್ಕೆಯಾಗಿವೆ.
ಪುಸ್ತಕ ಪುರಸ್ಕಾರವು ರೂ.25 ಸಾವಿರ ನಗದು, ಪ್ರಮಾಣಪತ್ರ ಒಳಗೊಂಡಿದೆ. ಇದೇ 20 ರಂದು ಸಂಜೆ 4ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.