ಕೋಟ, ಆ.14: ಕೋಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ ಮಹಾಸಭೆ ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆಯಿತು. ಸಂಘದಲ್ಲಿ ಒಟ್ಟು 5233 ಸದಸ್ಯರಿದ್ದು, 29 ಲಕ್ಷಕ್ಕೂ ಮಿಕ್ಕಿ ಪಾಲು ಬಂಡವಾಳ ಹೊಂದಿದ್ದು, ರೂ.11, 85,251.77 ಲಾಭ ಗಳಿಸಿದೆ ಎಂದು ಸಂಘದ ಕಾರ್ಯದರ್ಶಿ ಅಕ್ಷಯ ಕುಂದರ್ ತಮ್ಮ ವರದಿಯಲ್ಲಿ ತಿಳಿಸಿದರು.
ಸಂಘದ ಅಧ್ಯಕ್ಷ ಅಶೋಕ ತಿಂಗಳಾಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಮೀನುಗಾರರಾದ ನರಸಿಂಹ ಖಾರ್ವಿ ಇವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ ಉದಯ್ ಕಾಂಚನ್ 12% ಡಿವಿಡೆಂಟ್ ಘೋಷಣೆ ಮಾಡಿದರು. ೫೯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ನಿರ್ದೇಶಕರಾದ ಲಕ್ಷಣ ಬಿ ಸುವರ್ಣ, ಜಗನ್ನಾಥ ಬಂಗೇರ, ಚಂದ್ರ ಕಾಂಚನ್, ಜೆರೋಮ್ ರೊಡ್ರಿಗಸ್, ಅಣ್ಣಪ್ಪ ಕುಂದರ್, ಪ್ರಭಾಕರ್ ಮೆಂಡನ್, ಸುಧೀರ ಕುಂದರ್, ತಾರಾ, ತುಳಸಿ, ಪ್ರೆಸಿಲ್ಲಾ, ಪಲ್ಲವಿ, ಮಂಜುನಾಥ್ ಖಾರ್ವಿ, ಮಹೇಶ್ ಬಂಗೇರ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.