ಉಡುಪಿ, ಆ.9: ಜಿಲ್ಲೆಯಲ್ಲಿ ಶುಕ್ರವಾರ ಸಂಭ್ರಮದ ನಾಗರಪಂಚಮಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಹೆಚ್ಚಿನ ಸಾರ್ವಜನಿಕ ನಾಗಬನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಭಕ್ತಿಯಿಂದ ತನು ಹಾಕಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಲವೆಡೆ ಸಾರ್ವಜನಿಕರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಜಿಲ್ಲೆಯಲ್ಲಿ ಶುಕ್ರವಾರ ಮಳೆ ತುಸು ವಿರಾಮ ನೀಡಿದ್ದರಿಂದ ಭಕ್ತರಿಗೆ ಸಂಚರಿಸಲು ಅನುಕೂಲವಾಯಿತು. ಜಾಲತಾಣಗಳಲ್ಲಿ ನಿಸರ್ಗದಲ್ಲಿರುವ ನಾಗಬನಗಳ ಬಗ್ಗೆ ಹೆಚ್ಚಿನ ಚಿತ್ರಗಳು ಹಾರಿದಾಡುತ್ತಿತ್ತು. ಕಾಪು, ಕೋಟದಲ್ಲಿ ಜೀವಂತ ನಾಗನಿಗೆ ಪೂಜೆ ಸಲ್ಲಿಸುವ ಮೂಲಕ ನಾಗರಪಂಚಮಿ ಆಚರಿಸಲಾಯಿತು.
ಉಡುಪಿ: ಸಂಭ್ರಮದ ನಾಗರಪಂಚಮಿ
ಉಡುಪಿ: ಸಂಭ್ರಮದ ನಾಗರಪಂಚಮಿ
Date: