ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್ ನಲ್ಲಿ ಇತಿಹಾಸವನ್ನು ಸೃಷ್ಟಿಸಿದ ನಮ್ಮ ಭಾರತದ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಅಂಗವೈಕಲ್ಯ ತಮ್ಮ ಕನಸುಗಳಿಗೆ ಅಡ್ಡಿ ಬರುವುದಿಲ್ಲವೆಂದು ಜೀವನ ಪಾಠವನ್ನು ಕಲಿಸಿದ ಕ್ರೀಡಾಪಟುಗಳಿಗೆ ನನ್ನ ಪ್ರಣಾಮಗಳು. ಚಿಕ್ಕ ಪುಟ್ಟ ಸೋಲುಗಳಿಗೆ ಹತಾಶೆ ಪಡುವ ನಮಗೆ ಇದು ಒಂದು ಸ್ಪೂರ್ತಿಯ ಚಿಲುಮೆ. ಪ್ಯಾರಿಸ್ ನಲ್ಲಿ 7 ಬಂಗಾರದ ಪದಕ 9 ರಜತ ಹಾಗೂ 13 ಕಂಚಿನ ಪದಕಗಳನ್ನು ಗೆದ್ದಿದ್ದೇವೆ. ಎರಡು ಕೈಗಳಿಲ್ಲದ ಶೀತಲ್ ದೇವಿ (ಆರ್ಚರಿ), ರೋಡ್ ಆಕ್ಸಿಡೆಂಟ್ ನಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡ ಅವನಿ ಲೇಖಕರ್ (ಶೂಟಿಂಗ್), ಪೋಲಿಯೋ ಪೀಡಿತ ಮೋನಾ ಅಗರ್ವಾಲ್( ಶೂಟಿಂಗ್) ಟ್ರೈನ್ ಆಕ್ಸಿಡೆಂಟ್ ಅಲ್ಲಿ ಒಂದು ಕಾಲನ್ನು ಕಳೆದುಕೊಂಡ ನಿತೇಶ್ ಕುಮಾರ್ (ಬ್ಯಾಟ್ಮೆಂಟನ್), ಮೋಟಾರ್ ಬೈಕ್ ಆಕ್ಸಿಡೆಂಟ್ ನಲ್ಲಿ ಒಂದು ಕಾಲನ್ನು ಕಳೆದುಕೊಂಡ ಸುಮಿತ್ ಆಂಟಿಲ್ (ಜವೆಲಿಯನ್) ಡೆಂಗ್ಯೂ ಟ್ರೀಟ್ಮೆಂಟ್ ಮಾಡುವಾಗ ಔಷಧದ ಸೈಡ್ ಎಫೆಕ್ಟ್ ನಿಂದ 2 ಕಾಲುಗಳನ್ನು ಕಳೆದುಕೊಂಡ ಅರವಿಂದರ್ ಸಿಂಗ್ (ಆರ್ಚುರಿ) ಆರು ವರ್ಷವಿದ್ದಾಗ ಹುಲ್ಲು ಕಡಿಯುವ ಮಷೀನ್ ನಿಂದ ಒಂದು ಕೈಯನ್ನು ಕಳೆದುಕೊಂಡ ನಿಶಾದ ಕುಮಾರ್ (ಹೈ ಜಂಪ್) ಸೆರೆಬ್ರಲ್ ಪಾಲ್ಸಿ ಪೀಡಿತ ಪ್ರೀತಿ ಪಾಲ್ (ಹೈ ಜಂಪ್) ಇಂಟೆಲೆಕ್ಚ್ಯುವಲ ಡಿಸಬಿಲಿಟಿ ಇಂದ ಪೀಡಿತ ದೀಪ್ತಿ ಜೀವಂತಿ (400ಮೀ),ಇನ್ನು ಹಲವಾರು ನಮ್ಮ ಭಾರತೀಯ ಪ್ಯಾರಾಲಿಂಪಿಕ್ ಕ್ರೀಡಾಪಟುಗಳು ಯಾವುದೇ ನ್ಯೂನತೆ ಇಲ್ಲದ ನಮಗೆ ಪ್ರೇರಣೆ ನೀಡಿದ್ದು ಸುಳ್ಳಲ್ಲ.
ಇದೆಲ್ಲವೂ ಏನು ತೋರಿಸುತ್ತದೆ? ಜೀವನದಲ್ಲಿ ಅಸಾಧ್ಯವೆಂಬುದು ಯಾವುದು ಇಲ್ಲ. ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ನಾವು ನಮ್ಮ ಸಮಯವನ್ನು ಹೇಗೆ ಉಪಯೋಗಿಸುತ್ತಿದ್ದೇವೆ ಎನ್ನುವುದು. ಇದ್ದಷ್ಟು ದಿನ ಸಮಯವನ್ನು ಪೋಲು ಮಾಡದೆ ಸರಿಯಾದ ದಾರಿಯಲ್ಲಿ ನಮಗೆ ಖುಷಿ ಕೊಡುವ ಕಾರ್ಯದಲ್ಲಿ ಮಘ್ನರಾಗಬೇಕು. ಅಡ್ಡಿ ಆತಂಕಗಳನ್ನು ದೂರ ತಳ್ಳಿ ಒಂದೊಂದೇ ಮೆಟ್ಟಿಲನ್ನು ಏರುತ್ತಾ ನಮ್ಮ ಗುರಿಯನ್ನು ಸಾಧಿಸಬೇಕು. ಅಂಗವೈಕಲ್ಯವನ್ನು ಮೀರಿ ಸಾಧಿಸಿದ ಇವರನ್ನು ನೋಡಿ ‘ಕಷ್ಟ’ ಎನ್ನುವ ಪದ ಬಳಸಲು ನಾಚಿಕೆಯಾಗುತ್ತದೆ. ಕ್ಷುಲ್ಲಕ ಕಾರಣಗಳಿಗೆ ಅಳುವ ನಮಗೆ ಇವರು ಸ್ಪೂರ್ತಿದಾಯಕರು. ನಮಗೆ ನಮ್ಮ ಸಮಸ್ಯೆಗಳು ದೊಡ್ಡದಾಗಿ ಕಾಣಿಸಿದಾಗ ಇವರನ್ನು ನೆನಪು ಮಾಡುವುದು ಒಳ್ಳೆಯದು. ತಮ್ಮ ಗುರಿಯ ಯಶಸ್ಸಿನ ಅಡ್ಡಗೋಡೆಯನ್ನು ಬೀಳಿಸಿ ಮುಂದೆ ನಡೆದವರು ಇವರು. ಇವರಿಂದ ಜೀವನ ಪಾಠವನ್ನು ಕಲಿಯೋಣ. ಏನೇ ಸಾಧನೆ ಮಾಡಲು ಮನಸ್ಸೇ ಮುಖ್ಯ ಕಾರಣ ದೇಹವಲ್ಲವೆಂದು ತೋರಿಸಿಕೊಟ್ಟ ನಮ್ಮ ಪ್ಯಾರಾಲಿಂಪಿಕ್ ಕ್ರೀಡಾಪಟುಗಳಿಗೆ ವಂದನೆಗಳು. ಜೈ ಹಿಂದ್.
-ಡಾ.ಹರ್ಷಾ ಕಾಮತ್