ಮಂಗಳೂರು, ಆ.8: ಆಗಸ್ಟ್ 9ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ‘ಇದು ಎಂಥ ಲೋಕವಯ್ಯ’ ಸಿನಿಮಾದ ಪ್ರೀಮಿಯರ್ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮ ನಗರದ ಬಿಗ್ ಸಿನೆಮಾಸ್ ನಲ್ಲಿ ನಡೆಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಚಿತ್ರ ನಿರ್ಮಾಪಕ ಮಂಗಲ್ಪಾಡಿ ನರೇಶ್ ಶೆಣೈ, ಮೀನಾಕ್ಷಿ ಶೆಣೈ, ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ, ಉದ್ಯಮಿ ಪ್ರದೀಪ್ ಪೈ, ನಟ ವಿನೀತ್ ಕುಮಾರ್, ಪ್ರಕಾಶ್ ತೂಮಿನಾಡ್, ಯತೀಶ್ ಬೈಕಂಪಾಡಿ, ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್, ದೀಪಾ ಪೈ, ಗೋಪಿನಾಥ್ ಭಟ್, ದಾಯ್ಜಿ ವರ್ಲ್ಡ್ ನ ವಾಲ್ಟರ್ ನಂದಳಿಕೆ, ಚಂದ್ರಹಾಸ್ ಉಳ್ಳಾಲ, ಜಗನ್ನಾಥ ಶೆಟ್ಟಿ ಬಾಳ, ಕೆ.ಕೆ.ಪೇಜಾವರ ಮತ್ತಿತರರು ಉಪಸ್ಥಿತರಿದ್ದರು. ಕಿರಣ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.