ಉಡುಪಿ, ಆ.4: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಉಡುಪಿ ತಾಲೂಕಿನಾದ್ಯಂತ ಕೃತಕ ನೆರೆಯಿಂದ ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿ ಹಾನಿಗೊಳಗಾಗಿದ್ದು, ನೆರೆಪೀಡಿತ ಪ್ರದೇಶಗಳಿಗೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈವರೆಗೆ ಅಂದಾಜು 14000.00 ಹೆ. ಪ್ರದೇಶದಲ್ಲಿ ನಾಟಿ ಆಗಿದ್ದು, ಉಡುಪಿ ಹೋಬಳಿಯಲ್ಲಿ 10.80 ಹೆ., ಕೋಟ ಹೋಬಳಿಯಲ್ಲಿ 35.00 ಹೆ., ಬ್ರಹ್ಮಾವರ ಹೋಬಳಿಯಲ್ಲಿ 3.00 ಹೆ. ಹಾಗೂ ಕಾಪು ಹೋಬಳಿಯಲ್ಲಿ 14.00 ಹೆ., ಸೇರಿದಂತೆ ಒಟ್ಟು ಸುಮಾರು 62.80 ಹೆ.ಗಳಷ್ಟು ಬೆಳೆ ಹಾನಿ ಅಂದಾಜಿಸಲಾಗಿರುತ್ತದೆ.
ರೈತರಿಂದ ಇದುವರೆಗೆ ಕೇವಲ 11.05 ಹೆ. ಪ್ರದೇಶದ ಬೆಳೆ ಹಾನಿ ಪರಿಹಾರಕ್ಕಾಗಿ, ಅರ್ಜಿ ಸ್ವೀಕೃತವಾಗಿದ್ದು, ನಷ್ಟಕ್ಕೊಳಗಾದ ರೈತರು ಬೆಳೆ ಹಾನಿ ಕುರಿತು ಅರ್ಜಿ ಸಲ್ಲಿಸಿದ್ದಲಿ,್ಲ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ, ಜಂಟಿ ಸಮೀಕ್ಷೆ ಕೈಗೊಂಡು, ಮಾರ್ಗಸೂಚಿಯನ್ವಯ ಪರಿಹಾರ ಒದಗಿಸಬಹುದಾಗಿದೆ ಎಂದು ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.