ಉಡುಪಿ, ಜು.29: ಜೆಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ-ವೈಭವ ಮಂಗಳೂರಿನಲ್ಲಿ ನಡೆಯಿತು. ಜೆಸಿಐ ಉಡುಪಿ ಸಿಟಿಯ ಪೂರ್ವ ಅಧ್ಯಕ್ಷ, ಪೂರ್ವ ವಲಯಾಧಿಕಾರಿ ಉದಯ್ ನಾಯ್ಕ್ ಅವರಿಗೆ ಪ್ರತಿಷ್ಠಿತ ಸಾಧನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿಮಾ ಉದ್ಯೋಗ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅದೇ ರೀತಿ ಜೇಸಿ ಸಂಸ್ಥೆಗೆ ನೀಡಿರುವ ಅನನ್ಯ ಕೊಡುಗೆಯನ್ನು ಶ್ಲಾಘಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.
ವಲಯ ಅಧ್ಯಕ್ಷರಾದ ಗಿರೀಶ್ ಎಸ್ ಪಿ., ರಾಷ್ಟ್ರೀಯ ಉಪಾಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ವ್ಯವಹಾರ ವಿಭಾಗದ ನಿರ್ದೇಶಕ ಸುನಿಲ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ, ಮುರುಳಿ ಶಾಮ್, ಅನಿಲ್, ಪೂರ್ವ ವಲಯ ಅಧ್ಯಕ್ಷ ಅಲನ್ ರೋಹನ್ ವಾಝ್, ವಲಯ ಉಪಾಧ್ಯಕ್ಷ ದೀಪಕ್ ರಾಜ್, ಉಡುಪಿ ಸಿಟಿ ಅಧ್ಯಕ್ಷೆ ಡಾ.ಹರಿಣಾಕ್ಷಿ ಕರ್ಕೇರ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.