ನವದೆಹಲಿ, ಜು.28: ವಿಕಸಿತ ಭಾರತ ಸಂಕಲ್ಪ ಸಾಕಾರಗೊಳ್ಳುವುದು ಪ್ರತಿಯೊಬ್ಬ ಭಾರತೀಯನ ಮಹತ್ವಾಕಾಂಕ್ಷೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ ನೀತಿ ಆಯೋಗದ 9 ನೇ ಆಡಳಿತ ಮಂಡಳಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯಗಳು ನೇರವಾಗಿ ಜನರೊಂದಿಗೆ ಸಂಪರ್ಕ ಹೊಂದಿರುವುದರಿಂದ ಈ ಗುರಿಯನ್ನು ಸಾಧಿಸಲು ಸಕ್ರಿಯ ಪಾತ್ರವನ್ನು ವಹಿಸಬಹುದು. ಈ ದಶಕವು ಬದಲಾವಣೆಗಳು, ತಾಂತ್ರಿಕ ಮತ್ತು ಭೌಗೋಳಿಕ-ರಾಜಕೀಯ ಮತ್ತು ಅವಕಾಶಗಳಿಂದ ಕೂಡಿದೆ. ಭಾರತವು ಈ ಅವಕಾಶಗಳ ಸದ್ಬಳಕೆ ಮಾಡಬೇಕು ಮತ್ತು ಅಂತರರಾಷ್ಟ್ರೀಯ ಹೂಡಿಕೆಗಳಿಗೆ ಅನುಕೂಲಕರವಾದ ನೀತಿಗಳನ್ನು ಮಾಡಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಇದು ಪ್ರಗತಿಯ ಮೆಟ್ಟಿಲು. ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ನೂರು ವರ್ಷಗಳಿಗೊಮ್ಮೆ ಬರುವ ಸಾಂಕ್ರಾಮಿಕ ಮಹಾಮಾರಿಯನ್ನು ಸೋಲಿಸಿದೆ. ಎಲ್ಲಾ ರಾಜ್ಯಗಳ ಸಂಯೋಜಿತ ಪ್ರಯತ್ನದಿಂದ ವಿಕಸಿತ ಭಾರತ 2047 ರ ಕನಸುಗಳನ್ನು ನನಸಾಗಿಸಬಹುದು. ವಿಕಸಿತ ರಾಜ್ಯಗಳಿಂದ ವಿಕಸಿತ ಭಾರತ ನಿರ್ಮಾಣ ಸಾಧ್ಯ.
ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಮಾತನಾಡುತ್ತಾ, ಸಭೆಯಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಬಿಹಾರ, ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಪುದುಚೇರಿ ರಾಜ್ಯಗಳು ಸಭೆಯಲ್ಲಿ ಗೈರುಹಾಜರಾಗಿದ್ದರು ಎಂದು ಹೇಳಿದರು. ಜನಸಂಖ್ಯಾ ನಿರ್ವಹಣೆ ಮತ್ತು ಶೂನ್ಯ ಬಡತನದ ಪರಿಕಲ್ಪನೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅವರು ಹೇಳಿದರು.