ಉಡುಪಿ, ಜು.26: ನಗರದ ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಖಾಲಿ ಇರುವ ಎಸ್.ಹೆಚ್ (Sanitation and Hygiene) ಜಿಲ್ಲಾ ಸಮಾಲೋಚಕರ ಹಾಗೂ ಎಸ್.ಎಲ್.ಡಬ್ಲೂ.ಎಮ್ ಸಮಾಲೋಚಕರ ತಲಾ ಒಂದು ತಾತ್ಕಾಲಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಹೊರ ಸಂಪನ್ಮೂಲ ಏಜೆನ್ಸಿ ಮೂಲಕ ಆಯ್ಕೆ ಮಾಡಲು ಆಗಸ್ಟ್ 6 ರಂದು ಬೆಳಗ್ಗೆ 10 ಗಂಟೆಗೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಎಸ್.ಹೆಚ್ ಜಿಲ್ಲಾ ಸಮಾಲೋಚಕರ ಹುದ್ದೆಗೆ ಗ್ರಾಜ್ಯುಯೇಟ್ ಡಿಗ್ರಿ ಇನ್ ಇಂಜಿನಿಯರಿಂಗ್/ ಸೋಷಿಯಲ್ ಸೈನ್ಸ್/ ಪಬ್ಲಿಕ್ ಹೆಲ್ತ್, ಡಿಪ್ಲೋಮಾ, ಡಿಗ್ರಿ ಇನ್ ರೂರಲ್ ಮ್ಯಾನೆಜ್‌ಮೆಂಟ್ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇತರೆ ಸಂಬಂಧಿತ ಕ್ಷೇತ್ರಗಳಲ್ಲಿ ವಿದ್ಯಾರ್ಹತೆ ಹೊಂದಿರುವವರು ಹಾಗೂ ಎಸ್.ಎಲ್.ಡಬ್ಲೂ.ಎಮ್ ಸಮಾಲೋಚಕರ ಹುದ್ದೆಗೆ ಬಿ.ಇ ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್/ ಬಿ.ಇ ಸಿವಿಲ್ ಇಂಜಿನಿಯರಿಂಗ್ ಜೊತೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ವಿಶೇಷತೆ ಹೊಂದಿರುವ ಹಾಗೂ ಕನಿಷ್ಠ ೩ ವರ್ಷದ ಸೇವಾ ಅನುಭವವುಳ್ಳ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂ.ಸಂಖ್ಯೆ: 0820-2574942 ಸಂಪರ್ಕಿಸಬಹುದಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.6: ಮಣಿಪಾಲದಲ್ಲಿ ನೇರ ಸಂದರ್ಶನ
ಆ.6: ಮಣಿಪಾಲದಲ್ಲಿ ನೇರ ಸಂದರ್ಶನ
Date: