ನವದೆಹಲಿ, ಜು.22: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಇಲ್ಲಿಯವರೆಗೆ ಎರಡು ಕೋಟಿ 28 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ದಾಖಲಾಗಿದ್ದಾರೆ. ಇದರಲ್ಲಿ 13 ಲಕ್ಷದ 94 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಯಶಸ್ವಿಯಾಗಿ ನೋಂದಾಯಿಸಲ್ಪಟ್ಟಿದ್ದು, ಮಹಿಳೆಯರ ಸಂಖ್ಯೆ ಐದು ಲಕ್ಷದ 42 ಸಾವಿರದ 222 ಎಂದು ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಹೇಳಿದರು. ಸೋಮವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅವರು, ದೇಶಾದ್ಯಂತ ಒಟ್ಟು ಐದು ಲಕ್ಷದ ಮೂರು ಸಾವಿರದ 161 ಅಭ್ಯರ್ಥಿಗಳಿಗೆ ಮೂಲ ತರಬೇತಿಯನ್ನು ನೀಡಲಾಗಿದೆ. ಕರ್ನಾಟಕದಿಂದ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳು ಮೂಲಭೂತ ಕೌಶಲ್ಯ ತರಬೇತಿಯಡಿ ಪ್ರಮಾಣೀಕರಿಸಲ್ಪಟ್ಟಿದ್ದಾರೆ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಒಂದು ಲಕ್ಷದ ಒಂಬತ್ತು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರಮಾಣೀಕರಿಸಲ್ಪಟ್ಟಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 81 ಸಾವಿರ ಅಭ್ಯರ್ಥಿಗಳು ಮತ್ತು ಗುಜರಾತ್‌ನಲ್ಲಿ 79 ಸಾವಿರ ಅಭ್ಯರ್ಥಿಗಳು. ಕರ್ನಾಟಕದಲ್ಲಿ ಗರಿಷ್ಠ 85 ಸಾವಿರಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಮೂಲಭೂತ ಕೌಶಲ್ಯ ತರಬೇತಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿದ್ದಾರೆ ಎಂದು ಸಚಿವರು ಹೇಳಿದರು. ಕುಶಲಕರ್ಮಿಗಳಿಗೆ ಬೆಂಬಲ ನೀಡಲು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸಲಾಯಿತು. ಯೋಜನೆಯು 18 ಬಗೆಯ ವ್ಯಾಪಾರಗಳನ್ನು ಒಳಗೊಂಡಿದೆ.