ಕುಂಜಿಬೆಟ್ಟು, ಜು.18: ಉಡುಪಿ ನಗರಸಭೆ ವತಿಯಿಂದ ನಗರದ ಕಡಿಯಾಳಿಯ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಡೆಂಗ್ಯೂ ಮುಂಜಾಗೃತಾ ಮಾಹಿತಿ ಕಾರ್ಯಕ್ರಮ ನಡೆಯಿತು. ನಗರಸಭಾ ಪೌರಾಯುಕ್ತ ರಾಯಪ್ಪ ಮಾತನಾಡಿ, ಮಳೆಗಾಲಯದಲ್ಲಿ ಪರಿಸರದ ಸುತ್ತಮುತ್ತ ಸ್ವಚ್ಛತೆಯನ್ನುಕಾಯ್ದುಕೊಳ್ಳದೇ ಇದ್ದಲ್ಲಿ, ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ಸೊಳ್ಳೆ ಕಡಿತದಿಂದ ಡೆಂಗ್ಯೂನಂತಹ ಸಾಂಕ್ರಮಿಕ ರೋಗಗಳು ಹರಡುತ್ತವೆ ಎಂದ ಅವರು, ಅದನ್ನು ನಿಯಂತ್ರಿಸುವ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಬೇವಿನ ಎಣ್ಣೆಯನ್ನು ವಿತರಿಸಿದರು.
Regನಗರಸಭೆಯ ಪರಿಸರ ಅಭಿಯಂತರಾದ ಸ್ನೇಹ ಕೆಎಸ್., ಕಡಿಯಾಳಿಯ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ನ ನಿರ್ದೇಶಕ ಯು.ವಿದ್ಯಾವಂತ ಆಚಾರ್ಯ, ಪ್ರಾಂಶುಪಾಲರಾದ ವಿನ್ಸೆಂಟ್ ಡಿಕೋಸ್ತಾ, ಉಪ ಪ್ರಾಂಶುಪಾಲರಾದ ವಿನೂತಾ ಆಚಾರ್ಯ, ಪ್ರಭಾರ ಆರೋಗ್ಯ ನಿರೀಕ್ಷಕ ಸುರೇಂದ್ರ ಹೋಬಳಿದಾರ್, ಸೂಪರ್ ವೈಸರ್ಗಳಾದ ನಾಗರ್ಜುನ್, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.