ಕೋಟ, ಜು.6: ಆರೋಗ್ಯ ಕ್ಷೇತ್ರದಲ್ಲಿ ಆರೋಗ್ಯ ಕಚವ ವಾಹನಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ನಿರ್ವಾಹಕರ ಪಾತ್ರ ಅಷ್ಟೇ ಗಣನೀಯವಾಗಿದೆ ಎಂದು ಕೋಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ.ಮಾಧವ ಪೈ ಹೇಳಿದರು. ಬ್ರಹ್ಮಾವರ ತಾಲೂಕಿನ ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಆರೋಗ್ಯ ಕವಚ 108 ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವ. ಅದೇ ರೀತಿ ಆಂಬ್ಯುಲೆನ್ಸ್ ನಿರ್ವಾಹಕರು ಸಹ ಅಷ್ಟೇ ಪ್ರಮಾಣದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಾರೆ ಎಂದರು.
ಆರೋಗ್ಯ ಕವಚ 108 ಆಂಬ್ಯುಲೆನ್ಸ್ ಇದರ ಜಿಲ್ಲಾ ಪ್ರಬಂಧಕಮ್ ಗುರುರಾಜ್ ನಾಯಕ್, ಜಿಲ್ಲಾ 108 ಆಂಬ್ಯುಲೆನ್ಸ್ ವಾಹನ ನಿರ್ವಾಹಕರಾದ ಮಹಾಬಲ, ವೆಂಕಟೇಶ ನಾಯಕ, ಆರೋಗ್ಯ ಸೇವೆಯಲ್ಲಿಯಲ್ಲಿ00000ರರ ಸಂಘದ ಅಧ್ಯಕ್ಷ ಸಂದೀಪ್, ಇ.ಎಂ.ಟಿ ಜಾನ್ ಲೂಹಿಸ್, ಚಾಲಕರಾದ ಬಸವರಾಜ್,ಗಿರೀಶ್,ಕೋಟ ಸಮುದಾಯ ಆರೋಗ್ಯ ಕೇಮದ್ರದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.