ಉಡುಪಿ, ಜೂ.26: ಉಡುಪಿ ಜಿಲ್ಲೆಯಾದ್ಯಂತ ಬುಧವಾರ ದಿನವಿಡೀ ಮಳೆಯಾಗಿದೆ, ತನ್ಮೂಲಕ ಕೃಷಿ ಚಟುವಟಿಕೆ ಗರಿಗೆದರಿವೆ. ಜಿಲ್ಲೆಯ ಪ್ರಮುಖ ನದಿಗಳಲ್ಲಿ ಹರಿವು ಹೆಚ್ಚುತ್ತಿದೆ. ಕಡೆಕಾರು, ಶಿವಳ್ಳಿ, ಅಲೆವೂರು, ಪಡುತೋನ್ಸೆ, ಮಾಳ, ಹೇರೂರು, ವಂಡಾರು, ಹಾವಂಜೆ, ಹೆಗ್ಗುಂಜೆ, ಕಳ್ತೂರು ಗಾಳಿ ಮಳೆಯಿಂದ ಮನೆಗಳಿಗೆ ಭಾಗಶಃ ಹಾನಿಯಾಗಿವೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ: ಕಾರ್ಕಳ- 51.4 ಮಿಮೀ, ಕುಂದಾಪುರ-91.8, ಉಡುಪಿ-59.7, ಬೈಂದೂರು-92, ಬ್ರಹ್ಮಾವರ-100, ಕಾಪು-74.2, ಹೆಬ್ರಿ-69.9 ಮಿಮೀ ಮಳೆಯಾಗಿದೆ.