Wednesday, October 2, 2024
Wednesday, October 2, 2024

ಸರಕಾರಗಳು ಕನ್ನಡಕ್ಕೆ ನೀಡಿದ ಪ್ರೋತ್ಸಾಹದ ಕುರಿತು ಆತ್ಮಾವಲೋಕನ ಅಗತ್ಯ: ನರಸಿಂಹ ಐತಾಳ

ಸರಕಾರಗಳು ಕನ್ನಡಕ್ಕೆ ನೀಡಿದ ಪ್ರೋತ್ಸಾಹದ ಕುರಿತು ಆತ್ಮಾವಲೋಕನ ಅಗತ್ಯ: ನರಸಿಂಹ ಐತಾಳ

Date:

ಕೋಟ, ಜೂ.14:ನ್ನಡಪರ ಬೇಡಿಕೆಗಳಿಗೆ ಸರಕಾರದ ನಿರ್ಲಕ್ಷ್ಯ ಧೋರಣೆ ಮೊದಲು ನಿಲ್ಲಬೇಕು ಹಾಗೂ ಆಡಳಿತ ವ್ಯವಸ್ಥೆ ಕನ್ನಡ ಶಾಲೆಗಳಿಗೆ, ಸಾಹಿತ್ಯಕೆ ನೀಡಿದ ಪ್ರೋತ್ಸಾಹದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು, ಆಗ ಮಾತ್ರ ಬದಲಾವಣೆ ಸಾಧ್ಯ ಎಂದು ಬ್ರಹ್ಮಾವರ ತಾಲೂಕು ಸಮ್ಮೇಳನಾಧ್ಯಕ್ಷ, ಶಿಕ್ಷಕ ಪಾರಂಪಳ್ಳಿ ನರಸಿಂಹ ಐತಾಳ ಅಭಿಪ್ರಾಯಪಟ್ಟರು. ಅವರು ಕ.ಸಾ.ಪ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕ ಆಶ್ರಯದಲ್ಲಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ ಸಹಕಾರದಲ್ಲಿ ಸಾಲಿಗ್ರಾಮ ಪಾರಂಪಳ್ಳಿಯ ಮಹಾವಿಷ್ಣು ಸಭಾಂಗಣದಲ್ಲಿ ಜರಗಿದ ಬ್ರಹ್ಮಾವರ ತಾಲೂಕು ೪ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣದಲ್ಲಿ ಮಾತನಾಡಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕನ್ನಡ ಶಾಲೆಯಲ್ಲಿ ಕಲಿತವರೇ ಆಡಳಿತ, ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಆದರೂ ಕನ್ನಡ ಬಡವಾಗುತ್ತಿರುವುದು ನಮ್ಮ ಅಭಿಮಾನ ಶೂನ್ಯತೆಗೆ ಸಾಕ್ಷಿಯಾಗಿದೆ ಎಂದರು. ಸಾಂಸ್ಕೃತಿಕ ಚಿಂತಕ ಆನಂದರಾಮ ಉಡುಪ ಚಿತ್ರಪಾಡಿ ಸಮಾರೋಪ ಭಾಷಣಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಶುಭ ಹಾರೈಸಿದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ, ಸಾಧಕ ಸಂಸ್ಥೆಗಳಿಗೆ, ಸಮ್ಮೇಳನದ ಸರ್ವಾಧ್ಯಕ್ಷ ನರಸಿಂಹ ಐತಾಳ ದಂಪತಿಗಳನ್ನು ಸನ್ಮಾನಿಸಲಾಯಿತು. ಉದ್ಯಮಿ ಗುಂಡ್ಮಿ ನರಸಿಂಹ ಐತಾಳ ಸನ್ಮಾನ ನೆರವೇರಿಸಿದರು. ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಗದೀಶ್ ನಾವಡ, ಸಾಂಸ್ಕೃತಿಕ ಚಿಂತಕ ಶೇಡಿಕೊಡ್ಲು ವಿಟ್ಠಲ ಶೆಟ್ಟಿ, ಕ.ಸಾ.ಪ. ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ, ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕ.ಸಾ.ಪ. ಪದಾಧಿಕಾರಿಗಳಾದ ನರೇಂದ್ರ ಕುಮಾರ್ ಕೋಟ, ಅಚ್ಯುತ್ ಪೂಜಾರಿ, ಉದ್ಯಮಿ ರಾಮಚಂದ್ರ ಉಪಾಧ್ಯ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ ಇದ್ದರು. ನಾಗರಾಜ್ ಅಲ್ತಾರು ಸ್ವಾಗತಿಸಿ, ಸತೀಶ್ ವಡ್ಡರ್ಸೆ ನಿರೂಪಿಸಿ, ಮಾರುತಿ ಕೆ.ಪಿ. ವಂದಿಸಿದರು.

ನಿರ್ಣಯ ರಹಿತ ಸಮ್ಮೇಳನ: ಈ ಹಿಂದೆ ವಿಶ್ವ ಕನ್ನಡ ಸಮ್ಮೇಳನದಿಂದ ಹಿಡಿದು ಹೋಬಳಿ ಸಮ್ಮೇಳನದ ತನಕ ಸಾವಿರಾರು ನಿರ್ಣಯಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದೆ. ಆದರೆ ಅದರಲ್ಲಿ ಗೌರವದಿಂದ ಅನುಷ್ಠಾನ ಮಾಡಿದ ನಿರ್ಣಯಗಳು ಬೆರಳೆಣಿಕೆಯಷ್ಟು ಸಿಗಬಹುದು. ಹೀಗಾಗಿ ಈ ಬಾರಿಯ ತಾಲೂಕು ಸಮ್ಮೇಳನದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ. ಇದು ಆಡಳಿತ ವ್ಯವಸ್ಥೆಗೆ ನಮ್ಮ ಕಡೆಯಿಂದ ಸಾತ್ವಿಕ ಅಸಮಾಧಾನ ಎಂದು ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ತಿಳಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.3 ರಿಂದ 11: ಬೆಳ್ಮಣ್ಣು ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಬೆಳ್ಮಣ್ಣು, ಅ.1: ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್...

ಕ್ವಿಜ್‌: ಉಡುಪಿ ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ

ಉಡುಪಿ, ಅ.1: ಅಂತರಾಷ್ಟ್ರೀಯ ಹೃದಯ ದಿನಾಚರಣೆಯ ಅಂಗವಾಗಿ ಆದರ್ಶ ಸಮೂಹ ಸಂಸ್ಥೆಗಳು...

ಪುಸ್ತಕ ಓದಿ ಬಹುಮಾನ ಗೆಲ್ಲಿ

ಉಡುಪಿ, ಅ.1: ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ...

ಥ್ರೋಬಾಲ್: ಶಮಿತ್ ಖಾರ್ವಿ ರಾಜ್ಯಮಟ್ಟಕ್ಕೆ

ಉಡುಪಿ, ಅ.1: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಹಿಂದೂ...
error: Content is protected !!