Tuesday, October 1, 2024
Tuesday, October 1, 2024

ತೆಂಕನಿಡಿಯೂರು: ತುಳುಕೂಟ ಉದ್ಘಾಟನೆ

ತೆಂಕನಿಡಿಯೂರು: ತುಳುಕೂಟ ಉದ್ಘಾಟನೆ

Date:

ಮಲ್ಪೆ, ಜೂ.13: ಪ್ರಾಚೀನ ಮತ್ತು ಆಧುನಿಕ ಮತ್ತು ಆಧುನಿಕೋತ್ತರ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ, ಪರಂಪರೆ ಹಾಗೂ ವೈವಿಧ್ಯಮಯ ಹಿನ್ನಲೆ ಹೊಂದಿರುವ ತುಳುವ ನಾಡಿನಲ್ಲಿ ವಾಸಿಸುತ್ತಿದ್ದೇವೆ. ತುಳುನಾಡಿನ ನಂಬಿಕೆ, ನಡವಳಿಕೆಗಳು, ಆಚಾರ- ವಿಚಾರಗಳು, ಸಂದಿ ಪಾಡ್ದನಗಳು, ತಾಳ ಮದ್ದಳೆ, ಯಕ್ಷಗಾನ, ಜಾನಪದ, ಕಲೆಗಳು, ಬಲೀಂದ್ರ ಪೂಜೆ, ಭೂತಾರಾಧನೆ, ಕೃಷಿ ಸಂಸ್ಕೃತಿ ನಮ್ಮ ಸಾರ್ಥಕ ಬದುಕಿಗೆ ಪ್ರೇರಕವಾಗಿದೆ ಎಂದು ಬಡಗುಬೆಟ್ಟು ಕೋಆಪರೇಟಿವ್ ಸಹಕಾರಿ ಸಂಘ ಹಾಗೂ ಉಡುಪಿ ತುಳು ಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು. ಅವರು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ತುಳುಕೂಟ ಉದ್ಘಾಟಿಸಿ ಮಾತನಾಡುತ್ತಿದ್ದರು.

ತುಳುಭಾಷೆ ನಮ್ಮ ಮನೆಯ ಮಾತಾಗಬೇಕು, ನಿತ್ಯವೂ ಆಡು ಭಾಷೆಯಾಗಬೇಕು ಎಂದು ಹೇಳಿದ ಅವರು ಈ ಕಾಲೇಜಿನಲ್ಲಿ ತುಳುಕೂಟದ ಉದ್ಘಾಟನೆ ಮಾಡಿದ ಪ್ರೊ. ಸುರೇಶ್ ರೈಗಳ ಕ್ರಮವನ್ನು ಶ್ಪಾಘಿಸಿದರು. ಹೆಸರಾಂತ ನಾಟಕ ಕರ್ತೃ, ತುಳುಕೂಟದ ಸದಸ್ಯರಾದ ಗಂಗಾಧರ ಕಿದಿಯೂರು ದಿಕ್ಸೂಚಿ ಭಾಷಣ ಮಾಡುತ್ತಾ ತುಳುಭಾಷೆ ಮತ್ತು ಸಂಸ್ಕೃತಿ ಅನನ್ಯವಾದುದು. ಅದರ ಒಳತತ್ವವನ್ನು ಕುರಿತು ಅಳವಡಿಸಿಕೊಂಡು ಬದುಕಿದಾಗ ಮಾತ್ರ ಯಾವುದೇ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ಜೀವಂತವಾಗಿ ಉಳಿಯಲು ಸಾಧ್ಯ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಕಾಲದೊಂದಿಗೆ ಕೊಚ್ಚಿ ಹೋಗುವ ನಮ್ಮತನವನ್ನು ಅಳಿದು ಹೋಗದಂತೆ ಭದ್ರವಾಗಿ ರಕ್ಷಿಸುವ ಹಗೂ ಮುಂದಿನ
ಪೀಳಿಗೆಗೆ ಹಸ್ತಾಂತರ ಮಾಡುವ ಕರ್ತವ್ಯವನ್ನು ನಾವು ಎಂದೂ ಮರೆಯಬಾರದು ಎಂದರು.

ಕಾಲೇಜಿನ ತುಳುಕೂಟದ ಸಂಚಾಲಕಿ ರತ್ನಮಾಲಾ ಸ್ವಾಗತಿಸಿದರು. ವೇದಿಕೆಯಲ್ಲಿ ತುಳುಕೂಟದ ಆಟಕೂಟದ ಸಂಚಾಲಕಿ ವಿದ್ಯಾಸರಸ್ವತಿ, ನಿತ್ಯಾನಂದ ಗಾಂವ್ಕರ್, ಡಾ. ಪ್ರಸಾದ್ ರಾವ್ ಎಂ., ಕೃಷ್ಣ ಸಾಸ್ತಾನ ಮತ್ತು ಉಡುಪಿ ತುಳು ಕೂಟದ ಸದಸ್ಯರು ಉಪಸ್ಥಿತರಿದ್ದರು. ಕುಮಾರಿ ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ವಂದಿಸಿದರು. ಸುಮಾರು ೩೦೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಈ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪೋಷಣ್ ಮಾಸಾಚರಣೆ: ಸಮಾರೋಪ ಸಮಾರಂಭ

ಉಡುಪಿ, ಸೆ.30: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

ವಿಶ್ವ ಹೃದಯ ದಿನಾಚರಣೆ

ಉಡುಪಿ, ಸೆ.30: ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕ, ಓಕುಡೆ ಡಯಾಗ್ನೋಸಿಸ್ ಮತ್ತು...

ವಿಶ್ವ ರೇಬೀಸ್ ದಿನಾಚರಣೆ: ಮಾಹಿತಿ ಕಾರ್ಯಕ್ರಮ

ಉಡುಪಿ, ಸೆ.30: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಉಳಿಕೆಯಾಗಿರುವ ಗೋಧಿಯ ಬಹಿರಂಗ ಹರಾಜು

ಉಡುಪಿ, ಸೆ.30: ಕಾರ್ಕಳ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಗೋದಾಮಿನಲ್ಲಿ ಬಹುಕಾಲದಿಂದ ಉಳಿಕೆಯಾಗಿರುವ 151.25...
error: Content is protected !!