ಮಣಿಪಾಲ, ಜೂ.12: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರ ಪ್ರಮಾಣವಚನದ ಕಾರ್ಯಕ್ರಮವನ್ನು ಮಣಿಪಾಲ ಟೈಗರ್ ಸರ್ಕಲ್ ನಲ್ಲಿ ಬಿಜೆಪಿ ಮಣಿಪಾಲ ವಾರ್ಡ್ ಕಾರ್ಯಕರ್ತರ ನೇತೃತ್ವದಲ್ಲಿ ಬೃಹತ್ ಎಲ್.ಇ.ಡಿ ಪರದೆಯ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು. ಸಿಹಿ ತಿಂಡಿ ವಿತರಣೆ ಮತ್ತು ಮೋದಿ ಚಹಾ ವಿತರಣೆ ನಡೆಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಮಣಿಪಾಲ ವಾರ್ಡ್ ನಗರಸಭಾ ಸದಸ್ಯರಾದ ಕಲ್ಪನಾ ಸುಧಾಮ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆರ್ಗ ದಿನಕರ್ ಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಾಪೆಟ್ಟು, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯರಾದ ಶ್ಯಾಮಲ ಕುಂದರ್, ನಗರ ಕಾರ್ಯದರ್ಶಿ ಗುರುರಾಜ್ ಸರಳೇಬೆಟ್ಟು, ನಗರಸಭೆಯ ನಿಕಟಪೂರ್ವ ಅಧ್ಯಕ್ಷರಾದ ಸುಮಿತ್ರ ನಾಯಕ್ ಪರ್ಕಳ, ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ವಿಜಯಲಕ್ಷ್ಮಿ ಸರಳೇಬೆಟ್ಟು, ಮಹಿಳಾ ಮೋರ್ಚಾ ನಗರಾಧ್ಯಕ್ಷರಾದ ಅಶ್ವಿನಿ ಆರ್ ಶೆಟ್ಟಿ ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ನಿತಿನ್ ಪೈ, ಯುವಮೋರ್ಚಾ ವಕ್ತಾರ ಪ್ರಣವ್ ಕಾಮತ್, ಮಾಜಿ ನಗರಸಭಾ ಸದಸ್ಯರಾದ ನರಸಿಂಹ ನಾಯಕ್, ದೇವೇಂದ್ರ ಪ್ರಭು ಹಾಗೂ ಪಕ್ಷದ ಹಿರಿಯರು, ಮಣಿಪಾಲ ವಾರ್ಡ್ ಕಾರ್ಯಕರ್ತರು ಉಪಸ್ಥಿತರಿದ್ದರು.