Monday, September 30, 2024
Monday, September 30, 2024

ಶ್ರೀವ್ಯಾಸರಾಜರ ಕೊಡುಗೆ ಅಗಾಧ : ಪುತ್ತಿಗೆ ಶ್ರೀಪಾದರು

ಶ್ರೀವ್ಯಾಸರಾಜರ ಕೊಡುಗೆ ಅಗಾಧ : ಪುತ್ತಿಗೆ ಶ್ರೀಪಾದರು

Date:

ಉಡುಪಿ, ಜೂ.12: ಮಹಾಮಹಿಮರಾದ ಶ್ರೀವ್ಯಾಸರಾಜರು ವೇದಾಂತ ಪ್ರಪಂಚಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ರಚಿಸಿದ ನ್ಯಾಯಾಮೃತ-ಚಂದ್ರಿಕಾ-ತರ್ಕತಾಂಡವ ಗ್ರಂಥಗಳು ನರಸಿಂಹ ದೇವರ ಮೂರು ಕಣ್ಣಿನಂತೆ ಕಂಗೊಳಿಸುತ್ತಿವೆ. ಸಂಸ್ಕೃತ -ಕನ್ನಡ ವಾಙ್ಮಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿ ಶ್ರೀವ್ಯಾಸರಾಜರಿಗೆ ಸಲ್ಲುತ್ತದೆ. ಇಂಥಹ ಯತಿವರೇಣ್ಯರ ಗ್ರಂಥಗಳನ್ನು ಅಧ್ಯಯನ ಮಾಡುವುದು ಸುಕೃತದ ಫಲವಾಗಿದೆ ಎಂದು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಉಡುಪಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ಬೆಂಗಳೂರಿನ ಪ್ರಸಿದ್ಧ ವಿದ್ವಾಂಸರಾದ ಡಾ. ಎನ್.ವೆಂಕಟೇಶಾಚಾರ್ಯರು ನಡೆಸಿದ ನ್ಯಾಯಾಮೃತ ಗ್ರಂಥದ ಪಾಠದ ಮಂಗಳೋತ್ಸವದಲ್ಲಿ ಅನುಗ್ರಹ ಸಂದೇಶವನ್ನು ನೀಡಿ ತಮ್ಮ ಶಿಷ್ಯರಾದ ಡಾ. ವೆಂಕಟೇಶಾಚಾರ್ಯರ ಸಾಧನೆಯನ್ನು ಪ್ರಶಂಸಿಸಿ ಶ್ರೀಕೃಷ್ಣಾನುಗ್ರಹದೊಂದಿಗೆ ಸನ್ಮಾನಿಸಿದರು. ಪಾಠ ಕೇಳಿದ ಶಿಷ್ಯರು ಸುವರ್ಣದ ಶ್ರೀಕೃಷ್ಣ ಪ್ರತಿಮೆಯನ್ನು ಡಾ.ವೆಂಕಟೇಶಾಚಾರ್ಯರಿಗೆ ಪೂಜ್ಯ ಶ್ರೀಪಾದರ ಮೂಲಕ ನೀಡಿ ಸತ್ಕರಿಸಿದರು. ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿದ್ವಾನ್ ಸತ್ಯನಾರಾಯಣ ಆಚಾರ್ಯ, ಡಾ.ಬಿ.ಗೋಪಾಲಾಚಾರ್ಯ ಮುಂತಾದ ವಿದ್ವಾಂಸರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕರಾವಳಿ ಸಾಹಿತಿಗಳು-ಕಲಾವಿದರು-ಲೇಖಕರು-ಕವಿಗಳು-ಚುಟುಕು ಬರಹಗಾರರ ಸಮ್ಮೇಳನ

ಕುಂಜಿಬೆಟ್ಟು, ಸೆ.29: ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ...

ಕುಟುಂಬ ಸಂಸಾರದ ನಡುವೆಯೂ ಸಾಧನೆಯ ಬೆನ್ನು ಹತ್ತಿದ ಗ್ರಾಮೀಣ ಮಹಿಳೆ

ಶಿಕ್ಷಣ ಎಂಬುದು ವ್ಯಕ್ತಿತ್ವ ವಿಕಸನದ ಅತ್ಯಂತ ಮುಖ್ಯವಾದ ಘಟ್ಟವಾಗಿದೆ. ಮುಸ್ಲಿಂ ಹೆಣ್ಣು...

ಪಂಚವರ್ಣ: 226ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಸೆ.29: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ...

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಗೆ ಭಾರತ ತಿರುಗೇಟು

ಯು.ಬಿ.ಎನ್.ಡಿ., ಸೆ.29: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್...
error: Content is protected !!